ಕೊರೊನಾಗೆ ಎರಡನೆಯ ಬಲಿ

ತೇರದಾಳ ; ಪಟ್ಟಣದ ಹಳೆಪೇಠ ಗಲ್ಲಿಯ ಯಾದವಾಡ ಓಣಿಯಲ್ಲಿನ ಕೊರೊನಾ ಪಾಸಿಟೀವ್ ಧೃಡಪಟ್ಟಿರುವ 60 ವರ್ಷದ ವ್ಯಕ್ತಿ ಬುಧವಾರ ಬೆಳಿಗ್ಗೆ ಮೃತರಾದರು.

  ಕೊರೊನಾ ವೈರಸ್ ನಾಗಾಲೋಟ ತೀವೃವಾಗಿದ್ದು, ಈಗ ಎರಡನೆಯ ಬಲಿ ತಗೆದುಕೊಂಡಂತಾಯಿತು. ತೀವೃ ಪಾಸಿಟೀವ್ ಲಕ್ಷಣಗಳು ಕಂಡು ಬಂದ ನಂತರ ಬಾಗಲಕೋಟ ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬುಧುವಾರ ಬೆಳಿಗ್ಗೆ ಮೃತರಾದರು. ಕೋವಿಡ್ ನಿಯಮದ ಪ್ರಕಾರ ಅಲ್ಲಿಯೇ ಅಂತ್ಯಕ್ರಿಯೆ ಮಾಡಲಾಯಿತು ಎಂದು ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ತಿಳಿಸಿದ್ದಾರೆ.