ತೇರದಾಳದಲ್ಲಿ ಇಂದು ಎರಡು ಪಾಸಿಟಿವ ಪ್ರಕರಣ ಪತ್ತೆ

ತೇರದಾಳ : ಪಟ್ಟಣದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಎರಡು ಪಾಸಿಟಿವ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ತಳವಾರ ಗಲ್ಲಿಯಲ್ಲಿ ರವಿವಾರ ಸಾಯಂಕಾಲ 26ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ ಕಂಡು ಬಂದಿದೆ. ಸೋಮವಾರ ದಿನ ಹಳೆಪೇಠ ಗಲ್ಲಿಯಲ್ಲಿ 51ವರ್ಷದ ಪುರುಷನಿಗೆ ಕೊರೊನಾ ಸೋಂಕು ಅಂಟಿಕೊಂಡಿದ್ದು ತಿಳಿದು ಬಂದಿದೆ. ಇವರು ವಾಸಿಸುತ್ತಿರುವ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯನ್ನು ರಬಕವಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. 

    ಕೊವಿಡ್- 19ನಿಂದ ರಕ್ಷಣೆ ಪಡೆಯಬೇಕಾದರೆ ಎಲ್ಲರೂ ಸ್ವಯಂವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಸ್ಯಾನಿಟೈಜರ್‍ದಿಂದ ಆಗಾಗ ಕೈತೊಳೆದುಕೊಳ್ಳಬೇಕು. ಸರಕಾರದ ನಿಯಮಗಳನ್ನು ಪಾಲಿಸುವುದರಿಂದ ಕೋವಿಡ್ 19ನ್ನು ತಡೆಗಟ್ಟಬಹುದು. ಹಾಗೂ ಯಾರೂ ಅನಾವಶ್ಯಕವಾಗಿ ಹೊರಗಡೆ ಸಂಚರಿಸುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದು ಕೊವಿಡ್ 19ನಿಂದ ರಕ್ಷಣೆ ಪಡೆಯಬೇಕು. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳು ಜಾಗೃತೆಯನ್ನು ಮೂಡಿಸುತ್ತಿದ್ದಾರೆ.