ಬನಹಟ್ಟಿಯ ಕೆಎಚ್‍ಡಿಸಿ ನಿಗಮದ ಆವರಣದಲ್ಲಿ ಪಕ್ಷದ ರಾಜ್ಯ ಘಟಕದ ಆದೇಶದಂತೆ ತೇರದಾಳ ಮತಕ್ಷೇತ್ರದ ಪ್ರತಿ ಭೂತನಲ್ಲಿ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸಿದ್ದು ಸವದಿ
ಗಿಡ ಮರಗಳನ್ನು ಉಳಿಸಿ ಬೆಳೆಸಿ
* ತೇರದಾಳ ಕ್ಷೇತ್ರದಲ್ಲಿ ಒಟ್ಟು 1500 ಗಿಡಗಳನ್ನು ನೆಡುವ ಗುರಿ
ರಬಕವಿ-ಬನಹಟ್ಟಿ,ಜು28: ಪ್ರಕೃತಿ ಉಳಿದರೆ ನಾವು ಉಳಿಯುತ್ತೇವೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಮರಗಳನ್ನು ಉಳಿಸಿ ಬೆಳೆಸಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ನಗರದ ಕೆಎಚ್‍ಡಿಸಿ ನಿಗಮದ ಆವರಣದಲ್ಲಿ ಪಕ್ಷದ ರಾಜ್ಯ ಘಟಕದ ಆದೇಶದಂತೆ ತೇರದಾಳ ಮತಕ್ಷೇತ್ರದ ಪ್ರತಿ ಭೂತನಲ್ಲಿ ಸಸಿನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು. ನಮ್ಮ ರಾಜ್ಯಘಟಕದ ಆದೇಶದಂತೆ ಪ್ರತಿ ಭೂತನಲ್ಲಿ 5 ಸಸಿ ಹಾಗೂ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1500 ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ. ಮರಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ಸುಂದರ ಪರಿಸರ ನಿರ್ಮಾಣ. ಹಾಗೂ ಶುದ್ಧವಾದ ಗಾಳಿಯೂ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಈಶ್ವರ ಪಾಟೀಲ, ಮಹಾದೇವ ಕೋಟ್ಯಾಳ, ಯಲ್ಲಪ್ಪ ಕಟಗಿ, ಪ್ರಭು ಪೂಜಾರಿ, ಈರಣ್ಣ ಚಿಂಚಖಂಡಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬುದ್ನಿ, ಶಿವಾನಂದ ಗಾಯಕವಾಡ, ಶಿವಾನಂದ ಕಾಗಿ, ಶಿವು ಗುಂಡಿ, ಗೌರಿ ಮಿಳ್ಳಿ, ಸುವರ್ಣ ಕೊಪ್ಪದ, ಸುನೀತಾ ನಂದಗೊಂಡ, ದುರ್ಗವ್ವ ಹರಿಜನ, ಶಂಕರೆವ್ವ ನಿರ್ವಾನಿ, ಬಾಬಾಗೌಡ ಪಾಟೀಲ, ಪಿ. ಜಿ. ಕಾಖಂಡಕಿ, ಕೆಎಚ್‍ಡಿಸಿ ಯೋಜನಾ ಆಡಳಿತಾಧಿಕಾರಿ ಆರ್. ಎಸ್. ರಾಜಣ್ಣ, ಬಿ. ಎಸ್. ಬಾಲನಾಯಕ, ಆರ್. ಎಸ್. ಶೇಡಬಾಳ, ಎಸ್. ವಿ. ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.

Social Plugin