ರಬಕವಿ-ಬನಹಟ್ಟಿ: ಕೊರೊನಾಕ್ಕೆ ಮೂರನೇ ಬಲಿ
*ಭಯನಾಕ ಸ್ಥಿತಿಯಲ್ಲಿ ರಬಕವಿ
ರಬಕವಿ-ಬನಹಟ್ಟಿ,ಜು18: ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾಗೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಇಂದು ಜು.18 ರಂದು ಶನಿವಾರ ಬಾಗಲಕೋಟೆ ಕೋವಿಡ್-19 ಆಸ್ಪತ್ರೆಯಲ್ಲಿ ರಬಕವಿಯ 60 ವರ್ಷದ ಮಹಿಳೆ ಕೊರೊನಾಗೆ ಬಲಿಯಾದ ಮೂರನೇಯ ವ್ಯಕ್ತಿಯಾಗಿದ್ದಾರೆ.
ನೆಗಡಿ, ಕೆಮ್ಮು ಹಾಗು ಜ್ವರದಿಂದ ಐಎಲ್‍ಐ ಹಾಗು ಸಾರಿಗೆ ಸಂಬಂಧಿಸಿದ ವ್ಯಕ್ತಿಗಳು ಹೆಚ್ಚಾಗಿರುವ ಕಾರಣ ರಬಕವಿ ಪಟ್ಟಣದಾದ್ಯಂತ ಆತಂಕದ ಛಾಯೆ ಹೆಚ್ಚಾಗಿದೆ. ಪಟ್ಟಣದ ಮಧ್ಯ ಭಾಗದಲ್ಲಿಯೇ ಸದ್ಯ ಸೀಲ್‍ಡೌನ್ ಆಗಿರುವ ಹಿನ್ನಲೆ ಮತ್ತಷ್ಟು ಜನರಿಗೆ ಸೋಂಕು ಹರಡುವ ಭೀತಿಯಿದ್ದು, ಜನತೆ ಎಚ್ಚರದಿಂದ ಕಾರ್ಯನಿರ್ವಹಣೆ ಮಾಡಬೇಕಿದ್ದು, ಕೊರೊನಾಗೆ ಸಂಬಂಧಿಸಿದ ಎಲ್ಲ ನಿಯಮಗಳ ಪಾಲನೆ ಅಗತ್ಯವಾಗಿದೆ.
ಈ ಕುರಿತು ಸದ್ಯ ತಾಲೂಕಾಡಳಿತ, ಆರೋಗ್ಯ ಇಲಾಖೆ, ನಗರಸಭೆ ಹಾಗು ಪೊಲೀಸ್ ಇಲಾಖೆ ತೀವ್ರ ಜಾಗೃತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಜನತೆ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಲಿದ್ದಾರೆ.