ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಮತ್ತೇ ಮೂವರಿಗೆ ಕೊರೊನಾ
ರಬಕವಿ-ಬನಹಟ್ಟಿ,ಜು1: ತಾಲೂಕಿನಾದ್ಯಂತ ಮತ್ತಷ್ಟು ಕೊರೊನಾ ಭೀಕರತೆ ಎದ್ದು ಕಾಣುತ್ತಿದ್ದು, ಶನಿವಾರ ತೇರದಾಳದಲ್ಲಿ ಇಬ್ಬರಿಗೆ ಹಾಗು ರಬಕವಿಯ ಓರ್ವರಿಗೆ ಕೊರೊನಾ ಪಾಜಿಟಿವ್ ಒಕ್ಕರಿಸಿದೆ.
ಯಾವದೇ ಟ್ರಾವೆಲ್ ಹಿಸ್ಟರಿಯಿಲ್ಲದೆ ಮನೆಯಲ್ಲಿಯೇ ಕುಳಿತ ಹಾಗು ತೀವ್ರ ಅನಾರೋಗ್ಯದಲ್ಲಿರುವ ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲುತ್ತಿರುವದು ತೀವ್ರ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದ್ದಲ್ಲದೆ ತಾಲೂಕಾಡಳಿತಕ್ಕೆ ತಲೆನೋವಾಗುವಲ್ಲಿ ಕಾರಣವಾಗಿದೆ.

Social Plugin