ನಿಮ್ಮ ಸಂರಕ್ಷಣೆಯೇ ನಮ್ಮ ಗುರಿ. ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಕೇಸ ದಾಖಲಮಾಡಲಾಗುವುದು.

(ವರದಿ ಕೆ.ಎಸ್.ರಂಗಸ್ವಾಮಿ)

ತೇರದಾಳ: ರಾಜ್ಯದಲ್ಲಿ ಕೊರೋನಾ ವೈರಸ್ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು ಕಾರಣ ಸಾರ್ವಜನಿಕರು ಇನ್ನುಮುಂದೆ ತುಂಬಾ ಜಾಗೃತೆಯಿಂದ ಜೀವನ ನಡೆಸುವ ಅವಶ್ಯಕತೆ ಇದೆ.

ಸರಕಾರ ನಿರಂತರವಾಗಿ ನಿಮ್ಮೆಲ್ಲರ ರಕ್ಷಣೆಗೊಸ್ಕರ ಹಗಲಿರುಳು ಶ್ರಮಿಸುತ್ತಲಿದೆ. ನಿಮ್ಮೆಲ್ಲರ ರಕ್ಷಣೆಯ ಜವಾಬ್ದಾರಿ ಹೊತ್ತ ಆರೋಗ್ಯ ಇಲಾಖೆ,ಪೋಲಿಸ್ ಇಲಾಖೆ,ಪೌರಾಡಳಿತ ಇಲಾಖೆ,ಕಂದಾಯ ಇಲಾಖೆಗಳು ತಮ್ಮ ಜೀವದ ಹಂಗು ತೊರೆದು ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಈ ಸಂದರ್ಭದಲ್ಲಿ ಸಾಕಷ್ಟು ಕೊರೋನಾ ವಾರಿಯರ್ಷಗಳು ಸೋಂಕಿಗೊಳಗಾಗಿದ್ದಾರೆ. ಹೀಗಾಗಿ ಸಾರ್ವಜನಿರು ಇನ್ನಾದರೂ ಎಚ್ಚೆತ್ತುಕೊಳ್ಳುದಿದ್ದರೆ  ಅಪಾಯ ತಪ್ಪಿದ್ದಲ್ಲ. ಆನಂತರ ಬದಲಾವಣೆ ಯಾಗುತ್ತೇವೆ ಎಂದರೆ ಅದಕ್ಕೆ ಅವಕಾಶವಿರುವುದಿಲ್ಲ. ಕಾರಣ ಈಗಲಾದರೂ ಅವಕಾಶವಿದೆ. ಈಗಲಾದರೂ ಇದನ್ನು ಸದುಪಯೋಗ ಮಾಡಿಕೊಂಡು ಬದಲಾವಣೆಯಾಗಬೇಕು. ಈ ಕೊರೋನಾ ವೈರಸ್‍ನ್ನು ನಿಯಂತ್ರಣ ಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ. ಇದರ ಔಷಧ ತಮ್ಮ ಕೈಯಲ್ಲಿಯೆ ಇದೆ. ಕಡ್ಡಾಯವಾಗಿ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು ಇದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ. ಇದನ್ನು ಪಾಲಿಸಲೇಬೇಕು. ಈಗ ಶ್ರಾವಣ ಪ್ರಾರಂಭವಾಗಿದ್ದರಿಂದ ಸಾಕಷ್ಟು ಭಕ್ತರು ಪ್ರತಿ ಸೋಮವಾರ ದೇವಸ್ಥಾನಗಳಿಗೆ,ಗುಡಿಗೋಪುರಗಳಿಗೆ,ಕಾಲ್ನಡಿಗೆ ಮೂಲಕ ಹೋಗಿ ದರ್ಶನ ಮಾಡಿಕೊಳ್ಳುವ ವಾಡಿಕೆ ಇದೆ. ಹೀಗಾಗಿ ಪ್ರಸ್ತುತ ಎಲ್ಲ ದೇವಸ್ಥಾನಗಳಲ್ಲಿ ಜನಸೇರುವ ನೀರಿಕ್ಷೆ ಇದೆ,ಕಾರಣ ಎಲ್ಲ ಭಕ್ತಾದಿಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ಕಾರಣ ದಯವಿಟ್ಟು ಯಾರು ಬೇಜವಾಬ್ದಾರಿಯಿಂದ ವರ್ತಿಸಬಾರದು.ನಿಮ್ಮ ಒಂದೇ ಒಂದು ನಿಷ್ಕಾಳಿಜಿತನ ಇಡೀ ಪಟ್ಟಣವನ್ನೇ ಆವರಿಸುವ ಸಾದ್ಯತೆ ಇದೆ.ಹೀಗಾಗಿ ತಾವುಗಳು ತಮ್ಮ ಪ್ರಾಣರಕ್ಷಣೆಗಾಗಿ ಮನೆಯಲ್ಲಿರುವುದು ಬಹಳ ಉತ್ತಮ. ಕಾರಣ ಯಾರಾದರೂ ಸರಕಾರದ ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಅದಕ್ಕೆ ಭಕ್ತರು ಹಾಗೂ ಆ ದೇವಸ್ಥಾನದ ಅರ್ಚಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕೇಸ ದಾಖಲಮಾಡಲಾಗುವುದು ಎಂದು ರಬಕವಿ ಬನಹಟ್ಟಿ ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ಹಾಗೂ ತೇರದಾಳದ ಫ್ಲೈಯಿಂಗ ಸ್ಕ್ವಾಡ್ ಈರಣ್ಣ ದಡ್ಡಿಯವರು ಈ ಮೂಲಕ ತಾಲೂಕಿನ ಎಲ್ಲ ಭಕ್ತಾದಿಗಳಿಗೆ,ದೇವಸ್ಥಾದ ಅರ್ಚಕರಿಗೆ ಹಾಗೂ ಇನ್ನೂಳಿದ ಸಾರ್ವಜನಿಕರಿಗೆ ಈ ಮೂಲಕ ತಿಳಿಸಿದ್ದಾರೆ.

  ನಾವು ತೆಗೆದುಕೊಂಡ ನಿರ್ಧಾರ ನಿಮ್ಮ ಹಾಗೂ ನಿಮ್ಮ ಕುಟುಂಬದ ಹಾಗೂ ನಿಮ್ಮ ಇಡಿ ಪಟ್ಟಣದ ಸಂರಕ್ಷಣೆಗಾಗಿಯೇ ಹೊರತು ಬೇರೆನಿಲ್ಲ. ಪ್ರಸ್ತುತ ಈಗ ಪರಿಸ್ಥಿತಿ ತುಂಬಾ ನಾಜೂಕಾಗಿರುವದರಿಂದ ಎಲ್ಲರ ಸಹಕಾರದ ಅವಶ್ಯಕತೆ ಇದೆ. ಕಾರಣ ದಯವಿಟ್ಟು ತಪ್ಪು ಹೆಜ್ಜೆ ಇಟ್ಟು ಇನ್ನಷ್ಟು ವಾತಾವರಣವನ್ನು ಹದಗೆಡಿಸಬೇಡಿ. ನಿಮ್ಮ ಹಾಗೂ ನಿಮ್ಮ ಪಟ್ಟಣದ ರಕ್ಷಣೆ ನಿಮ್ಮ ಕೈಯಲ್ಲಿಯೇ ಇದೆ.ದಯವಿಟ್ಟು ಸರಕಾರದ ಆದೇಶಗಳನ್ನು ಪಾಲಿಸಿ ನಿಮ್ಮ ರಕ್ಷಣೆಯೊಂದಿಗೆ ನಿಮ್ಮ ಪಟ್ಟಣದ ಸಂರಕ್ಷಣೆ ಮಾಡಬೇಕೆಂದು ಈ ಮೂಲಕ  ತಿಳಿಸಿದ್ದಾರೆ.