ತೇರದಾಳ : ಪಟ್ಟಣದ ಜವಳಿ ಬಜಾರಿನ 58ವರ್ಷದ ಪುರುಷ ನಿನ್ನೆ ರವಿವಾರ ರಾತ್ರಿ ಸೋಂಕಿಗೆ ಮೊದಲನೇ ಬಲಿಯಾಗಿ ಪಟ್ಟಣದಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ.
ಶನಿವಾರ ಸೋಂಕಿತನು ಸೇರಿದಂತೆ ಅವರ ಕುಟುಂಬದ ಮೂರು ಜನ ಸದಸ್ಯರನ್ನು ಹಾಗೂ ಅವರ ಪ್ರಾಥಮಿಕ ಸಂಪರ್ಕದಲ್ಲಿರುವ ಅಂಗಡಿಯ 4ಜನ ಕೆಲಸದಾಳುಗಳನ್ನು ರಬಕವಿಯ ಓಬಿಸಿ ಹಾಸ್ಟೇಲ್‍ದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಈ ವ್ಯಕ್ತಿಯು ಮೊದಲಿನಿಂದಲೂ ಮೆಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದನು. ಶನಿವಾರ ರಾತ್ರಿ ಸೋಂಕಿತ ವ್ಯಕ್ತಿಗೆ ವಿಪರೀತ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ರವಿವಾರ ಬೆಳಿಗ್ಗೆ ಬಾಗಲಕೋಟ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಚಿಕಿತ್ಸೆ ಫಲಿಸದೆ ಮೃತರಾದರು. ಗಂಟಲ ದ್ರವ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ಪತ್ರಿಕೆಗೆ ತಿಳಿಸಿದರು.
Social Plugin