ರಬಕವಿಯಲ್ಲಿ ಜರುಗಿದ ತುರ್ತು ಸಭೆಯಲ್ಲಿ ಸ್ವಯಂಪ್ರೇರಿತವಾಗಿ ಅರ್ಧ ದಿನ ಲಾಕ್‍ಡೌನ್‍ಗೆ ಹಿರಿಯರು ನಿರ್ಧರಿಸಿದರು.
ರಬಕವಿಯಲ್ಲಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು-ಸ್ವಯಂ ಬಂದ್‍ಗೆ ನಿರ್ಧಾರ
ರಬಕವಿ-ಬನಹಟ್ಟಿ,ಜು19: ಕಳೆದ ಮೂರು ದಿನಗಳಿಂದ ರಬಕವಿಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದಂತೆ ಜನತೆ ಬೆಚ್ಚಿಬಿದ್ದಿದ್ದಾರೆ. ಇದರಿಂದ ಎಚ್ಛೇತ್ತುಕೊಂಡಿರುವ ರಬಕವಿ-ರಾಂಪೂರ-ಹೊಸೂರ ಪಟ್ಟಣಗಳ ಹಿರಿಯರು ಇಂದು ಬೆಳಿಗ್ಗೆ ದಿಢೀರ್ ಸಭೆ ಸೇರಿ ಅರ್ಧ ದಿನ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನ ಎರಡು ಗಂಟೆ ಬಳಿಕ ಸಂಪೂರ್ಣ ಬಂದ್‍ಗೆ ಮುಂದಾಗಿದೆ.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು, ಈ ಮುಂಚೆ ಸಾಂಸ್ಥಿಕ ಕ್ವಾರಂಟೈನ್‍ಗಳಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದ್ದವು. ಇದೀಗ ಪಟ್ಟಣ ಪ್ರವೇಶಿಸಿದ್ದು, ಅದರಲ್ಲೂ ಐಎಲ್‍ಐ ಹಾಗು ಸಾರಿಯಂತಹ ರೋಗಿಗಳಿಗೆ ತಗುಲುತ್ತಿರುವದರಿಂದ ಹೀಗೆ ಇನ್ನೆಷ್ಟು ಜನರಿಗೆ ಈ ಮಹಾಮಾರಿ ವಕ್ಕರಿಸಿದೆಯೋ ಗೊತ್ತಿಲ್ಲ. ಮತ್ತೊಂದೆಡೆ ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ದರೂ ಮಹಾಮಾರಿ ಹೆಗಲೇರಿದ್ದು ಹೇಗೆ ಎಂಬುವದು ಆಶ್ಚರ್ಯವಾಗಿದೆ.
ವ್ಯಾಪಾರ ವಹಿವಾಟುಗಳು ಮುಂದುವರೆದರೆ ಇನ್ನಷ್ಟು ಸಮಸ್ಯೆ ಎದುರಾಗಬಹುದು ಎಂಬ ಉದ್ದೇಶದಿಂದ ಜುಲೈ 22 ಬುಧವಾರದಿಂದ ಒಂದು ವಾರ ಕಾಲ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರವೇ ವಯಾಪಾರ ವಹಿವಾಟು ನಡೆಸಿ ಬಳಿಕ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.
ಇದೇ ಸಂದರ್ಭ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಈಶ್ವರ ನಾಗರಾಳ, ಡಾ. ಪದ್ಮಜೀತ ನಾಡಗೌಡಾ ಪಾಟೀಲ, ರಾಮಣ್ಣ ಹುಲಕುಂದ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಪರಪ್ಪ ಪೂಜಾರಿ, ಮಂಜು ಲೆಂಡಿ, ಸಂಜಯ ತೆಗ್ಗಿ, ಸಂಜು ಜೋತಾವರ, ಪಾಂಡು ಪೂಜಾರಿ, ಸತ್ಯಪ್ಪ ಮಗದುಮ್, ಪ್ರಕಾಶ ಸಿಂಗನ್, ಸುನೀಲ ವಜ್ಜರಮಟ್ಟಿ, ನಗರಸಭಾ ಸದಸ್ಯರು ಹಾಗು ರಬಕವಿ-ಹೊಸೂರ-ರಾಂಪೂರ ಪಟ್ಟಣಗಳ ಹಿರಿಯರು ಪಾಲ್ಗೊಂಡಿದ್ದರು.

Social Plugin