ತೇರದಾಳ ಪಟ್ಟಣದ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ ಇವರಿಗೆ ಪಟ್ಟಣದ ಪ್ರಮುಖರು ಸ್ವಯಂ ಘೋಷಣೆ ಬಂದ್ ಮಾಡುವ ಕುರಿತು ಮನವಿ ಸಲ್ಲಿಸಿದರು.

ತೇರದಾಳ ಸ್ವಯಂ ಘೋಷಿತ ಬಂದ್ ಬುದುವಾರ ಸಾಯಂಕಾಲದಿಂದ....

ತೇರದಾಳ : ಕೋವಿಡ್-19 ಮಹಾಮಾರಿ ತಡೆಗಟ್ಟಲು ತೇರದಾಳ ಪಟ್ಟಣವನ್ನು ಒಂದು ವಾರ ಸಂಪೂರ್ಣವಾಗಿ ಬುಧವಾರದಿಂದ ಸ್ವಯಂ ಘೋಷಣೆ ಬಂದ್ ಮಾಡಲಾಗುವುದು ಎಂದು ಪಟ್ಟಣದ ಪ್ರಮುಖರು ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ ಹಾಗೂ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಇವರಿಗೆ ಮನವಿ ಸಲ್ಲಿಸಿದರು.

  ಪಟ್ಟಣದಲ್ಲಿ ಕೊರೊನಾ ವೈರಸ್ ಅತೀ ವೇಗವಾಗಿ ಹರಡುತ್ತಿದ್ದು ಈಗಾಗಲೇ 6 ಪಾಸಿಟೀವ್ ಕೇಸ್‍ಗಳು ಪತ್ತೆಯಾಗಿದ್ದು ಮುಂದೆ ಹರಡದಂತೆ ಅದನ್ನು ತಡೆಗಟ್ಟಲು ಜು.22ರಂದು ಸಾಯಂಕಾಲ 6ಗಂಟೆಯಿಂದ ಜು.29 ಸಾಯಂಕಾಲ 6ಗಂಟೆಯವರೆಗೆ ಸ್ವಯಂ ಘೋಷಣೆ ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಈಗಾಗಲೇ ಈ ಕುರಿತು ಪುರಸಭೆ ಆವರಣದಲ್ಲಿ ಜು.18ರಂದು ಎಲ್ಲ ವ್ಯಾಪಾರಸ್ಥರು ಹಾಗೂ ಪಟ್ಟಣದ ಸಾರ್ವಜನಿಕರನ್ನು ಸಭೆ ಕರೆದು ಚರ್ಚಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪಟ್ಟಣದ ಎಲ್ಲ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಸಹಮತವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಅದಕ್ಕೆ ಪೋಲಿಸ್ ಇಲಾಖೆ, ಕಂದಾಯ ಮತ್ತು ಪುರಸಭೆ ಇಲಾಖೆ ಮುಖ್ಯಸ್ಥರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.

  ಈ ಸಂದರ್ಭದಲ್ಲಿ ಯುವ ಧುರೀಣ ಪ್ರವೀಣ ನಾಡಗೌಡ, ಪುರಸಭೆ ಮಾಜಿ ಸದಸ್ಯ ಹನಮಂತ ರೋಡನ್ನವರ, ರಾಮಣ್ಣ ಹಿಡಕಲ್ಲ, ಸದಾಶಿವ ಹೊಸಮನಿ, ಪಿ.ಎಸ್.ಮಾಸ್ತಿ, ಸಚೀನ ಕೊಡತೆ ಸೇರಿದಂತೆ ಇನ್ನಿತರರು ಇದ್ದರು.