ಬನಹಟ್ಟಿಯಲ್ಲಿ ಮಾನಸಿಕ ವ್ಯಕ್ತಿಯೋರ್ವ ಕಟ್ಟೆಯ ಮೇಲೆಯೇ ಕಳೆದೆರಡು ದಶಕಗಳಿಂದ ಬದುಕು ಸಾಗಿಸುತ್ತಿರುವದು.
20 ವರ್ಷಗಳಿಂದ ಕಟ್ಟೆಯೇ ಇವನಿಗೆ ಆಶ್ರಯ
* ಮಂಗನಂತಾಗಿರುವ 26 ರ ಯುವಕ
*ದೃಶ್ಯ ನೋಡಿದವರಿಗೆ ಮನಕಲುವದೇ ಇರಲಾರದು
ರಬಕವಿ-ಬನಹಟ್ಟಿ,ಡಿ22: ಆತನ ವರ್ಷ 26, ತಂದೆ-ತಾಯಿಯ ಯೋಗಕ್ಷೇಮ ನೋಡಿಕೊಳ್ಳುವ ವಯಸ್ಸು ಆದರೆ ಈತನಿಗೆ ಮೆದುಳಿನ ಸಮಸ್ಯೆ ಸೇರಿದಂತೆ ಮಾತು ಬರುವದಿಲ್ಲ. ಯಾರೇ ಏನೇ ಹೇಳಿದರೂ ಅರಿವೇ ಆಗದ ಸ್ಥಿತಿ. ಮಳೆಯಿರಲಿ, ಬಿಸಿಲಿರಲಿ ಆತನ ಬದುಕು ಮನೆ ಮುಂಭಾಗದಲ್ಲಿರುವ ಕಟ್ಟೆಯೇ ಕಳೆದ 20 ವರ್ಷಗಳಿಂದ ಆಶ್ರಯ ತಾಣ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಮುಲ್ಲಾ ಗಲ್ಲಿಯ ನಿವಾಸಿಯಾಗಿರುವ ಅಮ್ಜದ್‍ಖಾನ್ ಎಂಬಾತನೇ ವಿಚಿತ್ರ ಕಾಯಿಲೆಯಿಂದ ಪ್ರಾಣಿಯಂತೆ ಅನುಭವಿಸುತ್ತಿರುವ ಯುವಕ. ಈತನಿಗೆ ಪ್ರಪಂಚದ ಯಾವದೇ ಪರಿವೇ ಇಲ್ಲ. ಕಿಟಕಿಯೊಂದಕ್ಕೆ ಹಗ್ಗ ಕಟ್ಟಿ ಇನ್ನೊಂದೆಡೆ ಆತನ ಸೊಂಟಕ್ಕೆ ಬಿಗಿಯಾಗಿ ಕಟ್ಟಿ ಎಲ್ಲಿಯೂ ಹೋಗದಂತೆ, ಆತನಿಗೆ ಅಲ್ಲಿಯೇ ಊಟ, ನಿದ್ರೆ ಎಲ್ಲವೂ. ಹುಟ್ಟಿದಾಗಿನಿಂದಲೂ ಏಳೆಂಟು ವರ್ಷದವರೆಗೂ ಆತನಿಗೆ ಯಾವದೇ ಅರಿವು ಬರದಿದ್ದಾಗ ಆಸ್ಪತ್ರೆಗೆ ಅಲೆದಿದ್ದಾಗಿದೆ. ನಂತರ ವೈದ್ಯರ ಪ್ರಕಾರ ಆತನಲ್ಲಿರುವ ಅಂಗಾಂಗಗಳ ಸಮಸ್ಯೆ ಕಾರಣ ಹೀಗಾಗಿದೆ ಎಂದು ಆತನ ತಾಯಿ ಹೇಳುತ್ತಾಳೆ.
ನಿತ್ಯದ ಕಾರ್ಯ: ಈತ ಸಂಪೂರ್ಣ ಮನೋರೋಗದಿಂದ ಬಳಲುತ್ತಿರುವದಂತು ಸತ್ಯ. ಈತನ ತಂದೆ ನಿಧನರಾಗಿರುವ ಕಾರಣ ನಿತ್ಯ ತಾಯಿಯೇ ಸ್ನಾನ ಮಾಡಿಸಿ, ನಾಷ್ಟಾ, ಊಟ ಹೀಗೆ ನಿತ್ಯದ ಕಾಯಕಗಳಲ್ಲಿ ಭಾಗಿಯಾಗುತ್ತಾರೆ. ಈತನ ತಾಯಿಗೆ ಕುಟುಂಬ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಂಥರದಲ್ಲಿ ಈತನ ಮಗನ ವೈದ್ಯಕೀಯ ಚಿಕಿತ್ಸೆಗೆಂದು ಅಗಾಗ್ಗೆ ಧಾರವಾಡದ ಮಾನಸಿಕ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ತರುವದು ನಿರಂತರ ಸದ್ಯ ಅದೂ ಕೂಡ ಕಷ್ಟಕರವಾಗಿದೆ.
ಮಂಗನಂತಾಗಿರುವ ಬದುಕು: ಪಾಪ ಮಾನಸಿಕ ರೋಗಿ ಅಮ್ಜದ್‍ಖಾನ್ ಮಂಗನಂತೆ ಬದುಕು ನಡೆಸುತ್ತಿರುವದು ದುರದೃಷ್ಟಕರ. ಕಟ್ಟಿದ ಹಗ್ಗ ಬಿಚ್ಚಿದರೆ ಸಾಕು ಓಡೋಡಿ ಎಲ್ಲೆಂದರಲ್ಲಿ ತೆರಳುತ್ತಾನೆ. ಸ್ವಲ್ಪವೂ ನಿರ್ಲಕ್ಷ್ಯವಾದರೆ ಈ ಮಾನಸಿಕ ರೋಗಿ ಮನೆಗೆ ಬರೋದು ಪಟ್ಟಣದೊಳಗೆ ಎಲ್ಲಿಯೋ ಕಾಣಿಸಿದಾಗ ಅಲ್ಲಿನ ಜನ ತಿಳಿಸಿದಾಗ ಮಾತ್ರ ಮನೆಯವರಿಗೆ ಅರಿತು ಕರೆದುಕೊಂಡು ಬರುವ ಪರಿಪಾಟಲಿಗೆ ರೋಷಿ ಹೋಗಿದ್ದಾರೆ.
ಸೂರು ವ್ಯವಸ್ಥೆಯಾಗಲಿ: ಇದ್ದ ಮನೆ ಸೋರುತಿದೆ. ದುರಸ್ಥಿ ಮಾಡಲು ಆರ್ಥಿಕ ಸಾಮಧ್ರ್ಯವಿಲ್ಲದೆ ಬಡತನದಲ್ಲಿಯೇ ಬೆಂದ ಹೋಗಿದ್ದಾರೆ. ಸರ್ಕಾರದ ಮಹತ್ತರ ಯೋಜನೆಯಾಗಿರುವ ವಾಜಪೇಯಿ ಆಶ್ರಯ ಯೋಜನೆಗೆ ಸಂಬಂಧ ಕಳೆದ ಐದು ವರ್ಷಗಳಿಂದ ಅರ್ಜಿ ಹಾಕಿ ಸುಸ್ತಾಗಿದ್ದೂ, ಇಂತಹ ಅರ್ಹ ಕುಟುಂಬಗಳಿಗೆ ಸರ್ಕಾರ ಯೋಜನೆ ಒದಗಿಸಲು ಮುಂದಾಗಬೇಕಿದೆ.

- ನಿಮ್ಮ ಜಾಹೀರಾತುಗಳಿಗಾಗಿ 
ಸಂಪರ್ಕಿಸಿ  +91 9902523698