ಬನಹಟ್ಟಿ ಎಂ.ಎಂ.ಬಂಗ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪಿಯೂಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಬನಹಟ್ಟಿ ನಗರದ ಎಸ್‍ಆರ್‍ಎ ಪ.ಪೂ ಕಾಲೇಜ್ ವಿದ್ಯಾರ್ಥಿಗಳಿಗೆ ಮಾಜಿ ಸಚಿವೆ ಉಮಾಶ್ರೀ ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳಾದ ಚೇತನ ಸಿದ್ದಾಪುರ, ಶುಸ್ಮೀತಾ ಮುತ್ತೂರ, ಸಹನಾ ಹಳಿಂಗಳಿ, ಸಹನಾ ವಜ್ರಮಟ್ಟಿ, ವಿನಾಯಕ ತೇಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಸಾಧನೆಯೇ ನಿಜವಾದ ಸಾಧನೆ
ರಬಕವಿ-ಬನಹಟ್ಟಿ,ಜು25: ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಟ್ಟ ಪಾಠಗಳನ್ನು ಸರಿಯಾಗಿ ಆಲಿಸಿ ಇಸ್ಟಪಟ್ಟು ಓದಿ ಮಾಡುವ ಸಾಧನೆಯೇ ನಿಜವಾದ ಸಾಧನೆ ಎಂದು ಕಾಂಗ್ರಸ್ ಮುಖಂಡೆ ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಶುಕ್ರವಾರ ಸಂಜೆ ಬನಹಟ್ಟಿ ಎಂ.ಎಂ.ಬಂಗ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪಿಯೂಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ನಗರದ ಎಸ್‍ಆರ್‍ಎ ಪ.ಪೂ ಕಾಲೇಜ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಬಿ. ಆರ್. ಗೊಡ್ಯಾಳಿ ಮಾತನಾಡಿ, ತಾಲೂಕಿನ ಅನೇಕ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಿಂದ ಉನ್ನತ ಶಿಕ್ಷಣ ಅರಸಿ ಬಂದು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನ ಕಲ್ಪಿಸಿಕೊಟ್ಟ ವಿದ್ಯಾರ್ಥಿಗಳಿಗೆ ಹಾಗೂ ಈ ಸಾಧನೆಯ ಹಿಂದಿರುವ ಅನೇಕ ಶಿಕ್ಷಕರಿಗೆ ನಾನು ಚಿರರುಣಿಯಾಗಿರುತ್ತೇನೆ ಎಂದರು. ಸಾಧಕರಿಗೆ ಸನ್ಮಾನಿಸಿ ಮತ್ತಸ್ಟು ಹುಮ್ಮಸ್ಸು ತುಂಬಲು ಮಾಜಿ ಸಚಿವೆ ಉಮಾಶ್ರೀಯವರು ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇತನ ಸಿದ್ದಾಪುರ, ದ್ವಿತೀಯ ಸ್ಥಾನ ಪಡೆದ ಶುಸ್ಮೀತಾ ಮುತ್ತೂರ, ತೃತೀಯ ಸ್ಥಾನ ಪಡೆದ ಸಹನಾ ಹಳಿಂಗಳಿ, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಹನಾ ವಜ್ರಮಟ್ಟಿ, ತೃತೀಯ ಸ್ಥಾನ ಪಡೆದ ವಿನಾಯಕ ತೇಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜೇಂದ್ರ ಭದ್ರನ್ನವರ, ಮಲ್ಲಪ್ಪ ಸಿಂಗಾಡಿ, ಶಂಕರ ಜಾಲಿಗಿಡದ, ರಾಜು ಮಟ್ಟಿಕಲಿ, ಹುಮಾಯೂನ ಮುಲ್ಲಾ, ಹಾರೂನ ಬೇವೂರ, ಮಲಕಯ್ಯ ಭಂಗಿ, ಓಂಪ್ರಕಾಶ ಮನಗೂಳಿ, ಶಂಕರ ಕೆಸರಗೊಪ್ಪ, ಶ್ರೀಶೈಲ ಹಿತ್ತಲಮನಿ, ಬಸವರಾಜ ಶಿಂಧೆ ಸೇರಿದಂತೆ ಅನೇಕರಿದ್ದರು.