ರಬಕವಿಯ ದುರ್ಗಾದೇವಿ ದೇವಸ್ಥಾನದಲ್ಲಿ ಹಿರಿಯರಾದ ಶ್ರೀಶೈಲಪ್ಪ ಸಣಕಲ್‍ರನ್ನು ಸನ್ಮಾನಿಸಲಾಯಿತು.
ಗೌರವ, ಕೀರ್ತಿ ಖರೀದಿಸಲಾಗದು, ಗಳಿಸಬೇಕು
ರಬಕವಿ-ಬನಹಟ್ಟಿ,ಜು25: ಸನ್ಮಾನ ಎಲ್ಲರಿಗೂ ಸಿಗುವಂತಹದ್ದಲ್ಲ. ಗೌರವ, ಕೀರ್ತಿಯನ್ನು ಖರೀದಿಸಲಾಗದು, ಗಳಿಸಬೇಕಾಗುತ್ತದೆ. ಅದಕ್ಕಾಗಿ ದುಡಿಯಬೇಕಾಗುತ್ತದೆ ಎಂದು ಶಾಂತೇಶ ಪರಮಶೆಟ್ಟಿ ಹೇಳಿದರು.
ರಬಕವಿಯ ದುರ್ಗಾದೇವಿ ದೇವಸ್ಥಾನದಲ್ಲಿ ಗೋಪುರ ನಿರ್ಮಾಣಕ್ಕೆ ಸಹಾಯ ನೀಡಿದೆ ಹಿರಿಯರಾದ ಶ್ರೀಶೈಲಪ್ಪ ಸಣಕಲ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಧಿ, ವಿಶ್ವಾಸ, ಪುರುಷ ಪ್ರಯತ್ನಗಳ ಹಿಂದೆ ಪರಮಾತ್ಮ ಇರುತ್ತಾನೆಯೇ ಹೊರತು, ಸೋಮಾರಿಗಳ ಹಿಂದೆ ಪರಮಾತ್ಮ ಇರಲ್ಲವೆಂದರು.
ನಿರಂತರ ಸಾಮಾಜಿಕ ಕಳಕಳಿ ಹೊತ್ತು ಸೇವೆಗೈಯುತ್ತಿರುವ ಸಣಕಲ್‍ರ ಶ್ರಮ ಹೇರಳವಾಗಿದೆ. ಇವರಿಂದ ಪಟ್ಟಣದ ಏಳ್ಗೆಯಲ್ಲಿ ಮತ್ತಷ್ಟು ಸಹಕಾರಿಯಾಗುವ ಮೂಲಕ ಸಮಾಜಮುಖಿ ಕಾರ್ಯಗಳಾಗುತ್ತಿರುವದು ಹೆಮ್ಮೆ ತರುವಂಥದ್ದು ಎಂದರು.
ಇದೇ ಸಂದರ್ಭ ವಲ್ಲಿಸಾಬ ಹುಡೇದಮನಿ, ಈಶ್ವರಪ್ಪ ಜತ್ತಿ, ರವಿ ಬೀಳಗಿ, ಸದಾಶಿವ ಪೂಜಾರಿ, ಮಲ್ಲಿಕಾರ್ಜುನ ಗಡೆನ್ನವರ, ರಾಜು ಉಮದಿ, ಬಸಪ್ಪ ಬಾಗಿ, ಸದಾನಂದ ಅರಬಳ್ಳಿ ಸೇರಿದಂತೆ ಅನೇಕರಿದ್ದರು.