ಜಾಗೃತಿಗಾಗಿ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ
ರಬಕವಿ-ಬನಹಟ್ಟಿ,ಜು25: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸರಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅವರ ಹಾಗು ಕುಟುಂಬಗಳ ಜಾಗೃತಿಗಾಗಿ ಬನಹಟ್ಟಿ ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ವಿಶೇಷ ಕಾಳಜಿಯೊಂದಿಗೆ ಮಾಹಿತಿ ಒದಗಿಸುವ ಮೂಲಕ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚಿ ಒತ್ತು ನೀಡಿ ಎಲ್ಲ ಸಿಬ್ಬಂದಿಗಳಿಗೆ ಕಷಾಯ ಪಾಕೀಟ್ ಹಂಚಿದರು.
ಶನಿವಾರ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಿಂದ ನಡೆಯುತ್ತಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಸೋಂಕಿತರ ಮಧ್ಯದಲ್ಲಿಯೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ಸಂದರ್ಭ ಪಾಜಿಟಿವ್ ಪ್ರಕರಣಗಳು ಪೊಲೀಸರಲ್ಲಿಯೂ ತಗುಲುತ್ತಿರುವದು ಆತಂಕಕಾರಿ ವಿಷಯವಾಗಿದೆ. ಯಾವ ರೀತಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗು ಮುಂಜಾಗ್ರತೆಯಿಂದ ಪ್ರತಿ ನಿತ್ಯ ಬಳಕೆ ವಸ್ತುಗಳ ಕುರಿತು ಮಾಹಿತಿ ಒದಗಿಸಿದರು.
ಇದೇ ಸಂದರ್ಭ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಎಎಸ್‍ಐ ಸೈಫನ್ ನಾಟಿರ, ಸಂಜೀವ ಹನಗಂಡಿ, ನಿಂತಪ್ಪ ಸಂತಿವೂರ, ಶಾನೂರ ದೇಸಾಯಿ, ಸಂತೋಷ ಮುರಡಿ, ಮುತ್ತಪ್ಪ ಕೋಳೂರ ಸೇರಿದಂತೆ ಅನೇಕರಿದ್ದರು.

Social Plugin