ರಬಕವಿ-ಬನಹಟ್ಟಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ನಗರಸಭೆಯ ಅಧಿಕಾರಿ ಬಸವರಾಜ ಶರಣಪ್ಪನವರ ಅವರಿಗೆ ಮನವಿಯನ್ನು ಸಲ್ಲಿಸಿದರು.
ಮುಂದುವರೆದ ಆಶಾ ಕಾರ್ಯಕರ್ತೆಯ ಪ್ರತಿಭಟನೆ
ರಬಕವಿ-ಬನಹಟ್ಟಿ,13:ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.12000 ಗೌರವ ಧನ ನೀಡಬೇಕು, ಕೋವಿಡ್-19 ಹೋರಾಟ ಸಂದರ್ಭದಲ್ಲಿ ಅವರಿಗೆ ಅವಶ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು, ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ಹಾಗೂ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ನೀಡಬೇಕು ಎಂದು ಸ್ಥಳೀಯ ಆಶಾ ಕಾರ್ಯಕರ್ತೆ ಕವಿತಾ ಕಡ್ಲಿಮಟ್ಟಿ ತಿಳಿಸಿದರು.
ಅವರು ಸೋಮವಾರ ರಬಕವಿ ಬನಹಟ್ಟಿ ನಗರಸಭೆಯ ಅಧಿಕಾರಿ ಬಸವರಾಜ ಶರಣಪ್ಪನವರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮಿ ತಳವಾರ ಮಾತನಾಡಿ, ಆಶಾ ಕಾರ್ಯಕರ್ತೆಯರು ಹಲವಾರು ದಿನಗಳಿಂದ ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಸರ್ಕಾರ ಯಾವುದೆ ರೀತಿಯಾಗಿ ಸ್ಪಂದಿಸುತ್ತಿಲ್ಲ. ಕೋವಿಡ್-19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದಾರೆ. ಪ್ರಶಂಸೆಗಳು ಸಾಕಾಗಿವೆ. ಕೊರೊನಾ ವಾರಿಯರ್ಸ್ ಎಂದು ಕರೆಯಿಸಿಕೊಳ್ಳುವ ನಮಗೆ ಸರ್ಕಾರ ಆದಷ್ಟ ಬೇಗನೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಾರತಿ ಶಿರಗೂರ, ಬೇಬಿಶ್ರೀ ಹಾಸೀಲಕರ್, ಶೋಭಾ ಗುಣಕಿ,ಪೂಜಾ ಅಡವಿತೋಟ, ಶಿವಲೀಲಾ ಪಾಟೀಲ, ಲಕ್ಷ್ಮಿ ಹಳ್ಳಿ, ಸವಿತಾ ಔರಸಂಗ, ಕವಿತಾ ಆಲಗೂರ, ಸಕ್ಕೂಬಾಯಿ ಪೂಜಾರಿ, ಯಲ್ಲವ್ವ ಉಂಕಿ, ಗೀತಾ ಆರಗಿ ಇದ್ದರು.
- ನಿಮ್ಮ ಜಾಹೀರಾತುಗಳಿಗಾಗಿ

Social Plugin