ರಬಕವಿ ಬನಹಟ್ಟಿ : ಕೊರೊನಾ ವೈರಸ್ ನ ಪ್ರಭಾವದಿಂದ ಕಳೆದ ಹಲವು ತಿಂಗಳುಗಳಿಂದ ಎಲ್ಲ ವರ್ಗದ ಜನರು ಹಲವು ಸಮಸ್ಯೆಗಳಿಂದ ಬೇಸತ್ತು ಹೋಗಿದ್ದಾರೆ. ಅನೇಕ ರೋಗಿಗಳಿಗೆ ಅನಾನುಕೂಲ ವಾಗುತ್ತಲಿದೆ. ಕಾರಣ ಹಲವು ರೋಗಿಗಳು  ಮಹಾರಾಷ್ಟ್ರ ಹಾಗೂ ವಿಜಯಪುರ, ಹುಬ್ಬಳ್ಳಿ ಹೀಗೆ ಅನೇಕ ಕಡೇ ಚಿಕಿತ್ಸೆ ಪಡೆದಿರುತ್ತಾರೆ ಹೀಗಾಗಿ ಆ ರೋಗಿಗಳ ಕೆಲವು ಔಷಧಿಯನ್ನು ಅಲ್ಲಿಂದಲೇ ತರಿಸಬೇಕಾಗುತ್ತದೆ. ಈ ಲಾಕ್ ಡೌನ್ ಆದಾಗಿನಿಂದ ಇಂದಿನ ತನಕ ಹಲವಾರು ರೋಗಿಗಳು ಔಷಧಿ ತರುಹಿಸಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಬಕವಿ,  ಬನಹಟ್ಟಿ,  ತೇರದಾಳ,  ಜಮಖಂಡಿ,  ಹಾರೂಗೇರಿ,  ಮುಧೋಳ,  ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 10 ಬಾರಿಗೆ 800 ಕ್ಕೂ ಹೆಚ್ಚು ಜನಗಳಿಗೆ ಮಿರಜ್ ಸಾಂಗ್ಲಿ ಇನ್ನೂ ಅನೇಕ ಕಡೆಗಳಿಂದ  ಔಷಧಿ ತರಿಸಿಕೊಟ್ಟಿರುವ ಬನಹಟ್ಟಿಯ ಉತ್ಸಾಹಿ ಸೇವಾ ಮನೋಭಾವದ ಯುವಕ ಮಹಾಲಿಂಗೇಶ್ವರ ಅವರಾದಿ ಯವರ ಸೇವೆ  ಶ್ಲಾಘನಿಯ. 
ಇವರು ಯಾವುದೇ ಸರ್ವಿಸ್ ಚಾರ್ಜ್ ಪಡೆಯದೇ ಬರೀ ಔಷಧಿಯ ದುಡ್ಡು ಮಾತ್ರ ಪಡೆಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಷಯ ತಿಳಿದ ಅನೇಕರು  ಔಷಧಿ ತರುಹಿಸಿ ಇವರಿಗೆ ಧನ್ಯವಾದ ತಿಳಿಸಿದ್ದಾರೆ. 
ಇವರ ಈ ಸೇವೆ ಪಡೆಯಲಿಚ್ಚಿಸುವವರು ಈ ನಂಬರ್ ಗೆ ಸಂಪರ್ಕಿಸಿ : 9611254870 ಮಹಾಲಿಂಗೇಶ್ವರ ಅವರಾದಿ.