ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸ್ಥಿತಿ ಇನ್ನೂ ಗಂಭೀರ
*ಗ್ರಾಮದಲ್ಲಿ ಆವರಿಸಿದ ಸ್ಮಶಾನ ಮೌನ
ರಬಕವಿ-ಬಹಟ್ಟಿ,ಜು5: ಶನಿವಾರ ಬೆಳಿಗ್ಗೆ ಬಂಡಿಗಣಿ ಸಮೀಪದ ಅರಣ್ಯ ಪ್ರದೇಶದಲ್ಲಿ ತನ್ನ ಮೂವರೂ ಮಕ್ಕಳಿಗೆ ವಿಷ ಉಣಿಸಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಭಾಗ್ಯಶ್ರೀ ಚಿಕ್ಕಯ್ಯ ಮಠದ ಮಹಾಲಿಂಗಪೂರ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಸ್ಥಿತಿ ಗಂಭೀರವಾಗಿದೆ.
ಕಳೆದೆರಡು ವರ್ಷಗಳಿಂದ ಗಂಡನ ಬರ್ಬರ ಕೊಲೆಯಿಂದ ಮಾನಸಿಕ ಹಾಗು ಖಿನ್ನತೆಗೊಳಗಾಗಿ ತನ್ನ ಮಕ್ಕಳೊಂದಿಗೆ ಇಂತಹ ದುರ್ಘಟನೆ ನಡೆಯಲು ಕಾರಣವೆಂಬುದು ಪೊಲೀಸರ ಪ್ರಥಮ ತನಿಖೆಯಲ್ಲಿ ಕಂಡು ಬಂದ ವರದಿಯಾಗಿದೆ.
ಗ್ರಾಮದಲ್ಲಿ ನೀರವ ಮೌನ: ಇಡೀ ಬಂಡಿಗಣಿ ಗ್ರಾಮದಲ್ಲಿ ಈ ಪ್ರಕರಣದಿಂದ ಕರಾಳವಾಗಿದ್ದು, ಇಡೀ ಗ್ರಾಮವೇ ಮಮ್ಮಲ ಮರಗುತ್ತಿದೆ.
ಅಮಾಯಕವಾಗಿ ಮೂವರು ಮಕ್ಕಳನ್ನು ಕೊಂದು ತಾನೂ ವಿಷ ಸೇವನೆ ಮಾಡಿದ್ದರಿಂದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

Social Plugin