ಕಲಿವೀರ ಅಬ್ಬರ
ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ರಾಬರ್ಟ್, ಪೊಗರು, ಕೋಟಿಗೊಬ್ಬ 3, ಯುವರತ್ನ ಹೀಗೆ ದೊಡ್ಡ ಬಜೆಟ್ ನ ಸಿನಿಮಾಗಳು ಲಾಕ್ ಡೌನ್ ತೆರವಿನ ನಂತರ ತೆರೆಗೆ ಬರಲು ತಯಾರಿ ನಡೆಸಿದೆ. ಇದೆ ಸಾಲಿನಲ್ಲಿ ಸಧ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಯೊಂದಿಗೆ ವಿಭಿನ್ನ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೋ ಮೂಲಕ ಅಬ್ಬರ ಸೃಷ್ಟಿಸಿರುವ ಸಿನಿಮಾವೆ ಕಲಿವೀರ. 
ಕಲಿವೀರ ಎಂಬ ಮಾಸ್ ಟೈಟಲ್ ನ ಸಿನಿಮಾ, ನಿರಂತರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಾ ಬಂದಿದ್ದು, ಹೊಸ ತಲೆಮಾರಿನ ಪ್ರತಿಭಾವಂತರ ಜೊತೆಗೆ ಹಳೆ ತಲೆಮಾರಿನ ಅನೇಕ ತಂತ್ರಜ್ಞರು ಸೇರಿ ಮಾಡಿರುವ ಚಿತ್ರ. 
ಕನ್ನಡ ದೇಶದೊಳ್ ಎಂಬ ಅಪ್ಪಟ ಕನ್ನಡ ಸಿನಿಮಾ ನಿರ್ದೇಶಿಸಿದ್ದ ಅವಿರಾಮ್ ಕಂಠೀರವ, ಕಲಿವೀರ ಚಿತ್ರಕ್ಕಾಗಿ 'ಅವಿ' ಯಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಫುಲ್ ಮನರಂಜನೆ ಚಿತ್ರ ನೀಡಲು ಈ ಬಾರಿ ಸಕಲ ಸಿದ್ಧತೆಯೊಂದಿಗೆ ನಿರ್ದೇಶನಕ್ಕೆ ಇಳಿದ್ದಿದ್ದಾರೆ. ಕಲಿವೀರ ಚಿತ್ರ ಪ್ರೇಕ್ಷಕನಿಗೆ ಪೈಸ ವಸೂಲಿ ಜೊತೆಗೆ ಖಡಕ್ ಆಕ್ಷನ್ ನೀಡಲಿದ್ದು, ಚಿತ್ರದ ಹಾಡುಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು, ಈ ಚಿತ್ರ ಎಲ್ಲಾ ವರ್ಗಕ್ಕೂ ಇಷ್ಟವಾಗುವ ಸಿನಿಮಾ ವಾಗಲಿದೆ ಎಂಬುದು ನಿರ್ದೇಶಕ ಅವಿ ಅವರ ಮಾತು. 
ಇನ್ನೂ ಈ ಚಿತ್ರದಲ್ಲಿ ರಾಣಿಬೆನ್ನೂರಿನ ಧೈತ್ಯ ಪ್ರತಿಭೆ 'ಏಕಲವ್ಯ' ನಾಯಕ ನಟನಾಗಿ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ಧಾರೆ.  ಉತ್ತರ ಕರ್ನಾಟಕದ ಏಕಲವ್ಯ ಅದ್ಬುತವಾಗಿ ತಯಾರಿ ಮಾಡಿಕೊಂಡೆ ಚಿತ್ರರಂಗಕ್ಕೆ ಬಂದಿದ್ಧಾರೆ.  ಫೈಟ್ಸ್,  ಡಾನ್ಸ್, ಕಲರಿಯಂತಹ ಕಲೆಗಳೊಂದಿಗೆ ಯೋಗ ದಲ್ಲೂ ಸಹ ಪರಿಣಿತಿ ಹೊಂದಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರ ಬಹಳ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ಚಿತ್ರ ತಂಡದ ಮಾತು. 
ಇನ್ನೂ ಕಲಿವೀರ ಚಿತ್ರವನ್ನು ಕೆ.ಎಮ್.ಪಿ. ಶ್ರೀನಿವಾಸ, ರಾಜು ಪೂಜಾರ, ಹಾಗು ಹನುಮಂತಪ್ಪ ಪಿ. ಕೆ ರವರು 'ಜ್ಯೋತಿ ಆರ್ಟ್ಸ್' ಬ್ಯಾನರ್ ನ ಅಡಿಯಲ್ಲಿ ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡಿದ್ಧಾರೆ. ಅನಾಥ ಹುಡುಗ ಏಕಲವ್ಯರ ಪ್ರತಿಭೆಯನ್ನು ಹತ್ತಿರದಿಂದ ಕಂಡು ಅವರನ್ನು ನಾಯಕ ನಟರನ್ನಾಗಿ ಮಾಡಲು ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿರುವುದು ಕಲಿವೀರ ಚಿತ್ರದ ಮುಖ್ಯ ಅಂಶ. 
ಇನ್ನೂ ಕಲಿವೀರ ಚಿತ್ರಕ್ಕೆ ವಿ.ಮನೋಹರ್ - ಸಂಗೀತ, ಡಿಫರೆಂಟ್ ಡ್ಯಾನಿ - ಸಾಹಸ, ಎಸ್.ಹಾಲೇಶ್ - ಛಾಯಾಗ್ರಹಣ, ರಾಘವೇಂದ್ರ.ವಿ - ಹಿನ್ನೆಲೆ ಸಂಗೀತ, ಮುರಳಿ - ನೃತ್ಯ, ಎ.ಆರ್. ಕೃಷ್ಣ - ಸಂಕಲನ, ವಿ.ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ವಿ.ಮನೋಹರ್, ಗಿರಿಧರ್ ಎಳೆಹೊಳೆ, ಸಚಿನ್ ಕಡೂರ್ ಸಾಹಿತ್ಯ ಚಿತ್ರಕ್ಕಿದೆ. ಕಲಿವೀರ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ ಟಿ ಎಸ್ ನಾಗಾಭರಣ, ತಬಲಾ ನಾಣಿ, ಪಾವನ ಗೌಡ, ಚಿರಶ್ರೀ ಅಂಚನ್, ಅನಿತಾ ಭಟ್, ಡ್ಯಾನಿ ಕುಟ್ಟಪ್ಪ, ಮುನಿ, ನೀನಾಸಂ ಅಶ್ವಥ್, ಸೂರ್ಯ ನಾರಾಯಣ್, ರಾಕ್ ಲೈನ್ ಸುಧಾಕರ್, ಮೋಹನ್ ಜುನೇಜ, ಬೌ ಬೌ ಜಯರಾಮ್, ಸುರೇಶ್ ಚಂದ್ರ ಹೀಗೆ ದೊಡ್ಡ ತಾರಾಬಳಗದಲ್ಲಿ ಚಿತ್ರ ಮೂಡಿ ಬಂದಿದೆ. 
ಇಷ್ಟೆಲ್ಲ ಅದ್ದೂರಿಯಾಗಿ ತಯಾರಾಗಿರುವ ಕಲಿವೀರದ ಅಬ್ಬರ ಕಾಣಬೇಕಾದರೆ, ರಾಜ್ಯ ಸರ್ಕಾರವು ಚಿತ್ರಮಂದಿರಗಳ ಬಿಡುಗಡೆಗೆ ಅನುಮತಿ ಕೊಡುವವರೆಗು ಕಾಯಬೇಕು.

- ನಿಮ್ಮ ಜಾಹೀರಾತುಗಳಿಗಾಗಿ 
   ಸಂಪರ್ಕಿಸಿ +91 9902523698