👆ತಪ್ಪದೇ ಈ ಮೇಲಿನ ವಿಡಿಯೋ ನೋಡಿ ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ....ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698....
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಬಕವಿ-ಬನಹಟ್ಟಿ ಉಪತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ಮನವಿ ಅರ್ಪಿಸಲಾಯಿತು.
ನೇಕಾರರ ಆತ್ಮಹತ್ಯೆ ತಡೆಗಟ್ಟಲು ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳಲು ಆಗ್ರಹ ರಬಕವಿ-ಬನಹಟ್ಟಿ,ಜು6: ವೃತಿಪರ ನೇಕಾರರು ಸಾಲದಿಂದ ಆಗುತ್ತಿರುವ ತೊಂದರೆಗಳು ಮತ್ತು ಸಾಲದ ಹೊರೆಯಿಂದಾಗಿ ಸರಣಿ ಆತ್ಮ ಹತ್ಯೆಗಳನ್ನು ತಡೆಯಲು ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಲಾಕಡೌನ ಸಮಸ್ಯೆಯಿಂದ ನೇಕಾರರನ್ನು ಪಾರು ಮಾಡಲು ಸರಕಾರ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ ಅವರಿಗೆ ಮನವಿ ಅರ್ಪಿಸಿದರು ಈ ಸಂದರ್ಭದಲ್ಲಿ ಮತನಾಡಿದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ರಾಜ್ಯದಲ್ಲಿ ವೃತ್ತಿಪರ ನೇಕಾರರು ಕೋವಿಡ್-19 ನಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರಂತೆ ನೇಕಾರ ಬಗ್ಗೆ ಸರಕಾರ ಹೆಚ್ಚಿನ ಗಮನ ನೀಡಬೇಕಿದೆ. ಸಾಲದ ಹೊರೆಯಿಂದ ಆಗುತ್ತಿರುವ ಆತ್ಮ ಹತ್ಯೆಗಳನ್ನು ತಡೆಯುವುದು, ವೃತಿಪರ ನೇಕಾರರಿಗೆ ಕಾರ್ಮಿಕ ಸೌಲಭ್ಯಗಳನ್ನು ಜಾರಿಮಾಡುವುದು, ನೇಕಾರರ ಮಕ್ಕಳಿಗೆ ಉಚಿತ ಶಿಕ್ಷಣ ಜಾರಿ, ನೇಕಾರರ ಸಮ್ಮಾನ ಯೋಜನೆಯಲ್ಲಿ ಎಲ್ಲ ವೃತ್ತಿಪರ ನೇಕಾರರನ್ನು ಸೇರಿದಂತೆ ಕನಿಷ್ಠ 10 ಸಾವಿರ ರೂಗಳನ್ನು ಜಾರಿಮಾಡಬೇಕು. ಬೆಳಗಾವಿ, ಧಾರವಾಡ, ದೊಡ್ಡಬಳ್ಳಾಪುರ, ಜಿಲ್ಲೆಗಳ ನೇಕಾರರು ಸರಣಿ ಆತ್ಮ ಹತ್ಯೆಗೊಳಗಾಗಿದ್ದು ಕನಿಷ್ಠ 10 ಲಕ್ಷ ಪರಿಹಾರ ನೀಡಬೇಕು. ಕೆಎಚ್‍ಡಿಸಿ ಕಾಲನಿಯ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಾಗಿದ್ದು ಸರಕಾರ ಆದಷ್ಟು ಬೇಗನೇ ಇಡೇರಿಸಬೇಕು ಎಂದು ಹೇಳಿದರು. ಬನಹಟ್ಟಿ ಠಾಣೆಯ ಎಎಸ್‍ಐ ಎಸ್. ಬಾಬಾನಗರ, ಪಿಸಿ ನಿಂಗಪ್ಪ ಸಂತಿವೂರ, ನೇಕಾರರ ಪ್ರತಿನಿಧಿಗಳಾದ ಪರಮಾನಂದ ಬಾವಿಕಟ್ಟಿ, ಬಸವರಾಜ ಮುರಗೋಡ, ರಾಚಪ್ಪ ಹಟ್ಟಿ, ವಸಂತ ಬೆಳಗಲಿ, ವಿಠ್ಠಲ ಭಸ್ಮೆ, ಮಲ್ಲಪ್ಪ ಜೈನಾಪುರ, ಶ್ರೀಕಾಂತ ಮದಮಕನಾಳ, ರಾಜೇಂದ್ರ ಶೇಡಬಾಳ, ಎಸ್. ಎಸ್. ಉದಗಟ್ಟಿ ಇದ್ದರು.
Social Plugin