ಬನಹಟ್ಟಿಯ ಪತಂಜಲಿ ಯೋಗ ಪೀಠದಲ್ಲಿ ಗುರು ಪೂರ್ಣಿಮೆ ನಿಮಿತ್ತವಾಗಿ ಯೋಗ ಗುರುಗಳಾದ ಶಂಕ್ರಪ್ಪ ಅಮ್ಮಲಜೇರಿ ಮತ್ತು ಡಾ.ಪರಶುರಾಮ ರಾವಳ ಅವರನ್ನು ಸನ್ಮಾನಿಸಲಾಯಿತು.
ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗುವ ವ್ಯಕ್ತಿಯೆ ಗುರು
ರಬಕವಿ-ಬನಹಟ್ಟಿ,ಜು5: ಒಬ್ಬ ವ್ಯಕ್ತಿಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗುವ ವ್ಯಕ್ತಿಯೆ ಗುರುವಾಗಿದ್ದಾನೆ. ಜೀವನದಲ್ಲಿ ಉತ್ತಮರಾಗಿ ಬಾಳಬೇಕಾದರೆ ಉತ್ತಮ ಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಹಿರಿಯರಾದ ಶಂಕ್ರೆಪ್ಪ ಅಮ್ಮಲಜೇರಿ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ಪತಂಜಲಿ ಯೋಗ ಪೀಠದಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ.ಪರಶುರಾಮ ರಾವಳ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು.ಅದಕ್ಕಾಗಿ ಧ್ಯಾನ, ಯೋಗ ಮತ್ತು ಪ್ರಾಣಾಯಾಮಗಳನ್ನು ಗುರುಗಳಿಗೆ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿನಾಯಕ ತಾಂಬಟ, ಸುನೀಲ ಬಾಣಕಾರ, ಸಂಜಯ ಬಿದರಿ, ಚೇತನ ಕೊಪ್ಪದ, ದೇವು ಬಶೆಟ್ಟಿ, ಡಾ.ಶಿಲ್ಪಾ ಅಗಡಿ, ಗೀತಾ ಬಿರಾದಾರ, ಮಂಗಲಾ ಬಾಣಕಾರ, ಲಲಿತಾ ಪತ್ತಾರ ಇದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin