ತಹಶೀಲ್ದಾರ ಕಾರ್ಯಾಲಯದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ 34ನೇ ಪುಣ್ಯ ಸ್ಮರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಡಾ. ಬಾಬು ಜಗಜೀವನ ರಾಮ ಆದರ್ಶಗಳು ಮಾದರಿ
* ಡಾ. ಬಾಬು ಜಗಜೀವನ ರಾಮ್ ಅವರ 34ನೇ ಪುಣ್ಯ ಸ್ಮರಣೆ
ರಬಕವಿ-ಬನಹಟ್ಟಿ,ಜು6: ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನ ಮಂತ್ರಿಗಳಾದ ಡಾ. ಬಾಬು ಜಗಜೀವನ ರಾಮ್ ಅವರ ಆದರ್ಶಗಳು, ವಿಚಾರಧಾರೆಗಳು ಎಂದೆಂದೂ ಮಾದರಿಯಾಗಿವೆ ಎಂದು ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ ಹೇಳಿದರು.
ಅವರು ಸೋಮವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ 34ನೇ ಪುಣ್ಯ ಸ್ಮರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಡಾ. ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರೆಂದೇ ಹೆಸರುವಾಸಿಯಾದರು. ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೆದಾರರಾದ ಬಸವರಾಜ ಬಿಜ್ಜರಗಿ, ಎಸ್. ಐ. ಸೂಡಿ, ಪ್ರಕಾಶ ವಂದಾಲ, ಮಂಜು ನೀಲನ್ನವರ, ಅಲಿ ತಾಂಬೋಳಿ, ಬಿ. ಎಸ್. ಜಿಗಳೂರ, ದಾನೇಶ್ವರಿ ಆಲಗೂರ, ಕವಿತಾ ಗಿರಡ್ಡಿ, ದೀಪಾ ಖವಾಸಿ, ಸಂಗೀತಾ ವಾಲಿಕರ, ರವಿ ಈಟಿ, ಚೇತನ ಭಜಂತ್ರಿ, ಎಸ್. ಎಮ. ಸಜ್ಜನ, ಅಮೃತ ಚೌಧರಿ, ಕಿಶೋರ ಸೋನಾವನೆ, ಸಂತೋಷ ಮಾದರ ಸೇರಿದಂತೆ ಅನೇಕರು ಇದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin