ಪ್ರತಿಭೆಗೆ ಬಡವ-ಬಲ್ಲಿದ ಬೇಧವಿಲ್ಲ-ಸವದಿ
ರಬಕವಿ-ಬನಹಟ್ಟಿ,ಜು17: ಎಲ್ಲರಲ್ಲಿಯೂ ಪ್ರತಿಭೆಯೆನ್ನುವದು ಇದ್ಧೇ ಇರುತ್ತದೆ. ಬಡವ-ಬಲ್ಲಿದವೆಂಬ ಬೇಧವಿಲ್ಲದೆ ಅದನ್ನು ಸರಾಗವಾಗಿ ಬಳಸಿಕೊಂಡು ಸಾಂದರ್ಭಿಕವಾಗಿ ಬಳಕೆ ಮಾಡಿಕೊಂಡು ಭವಿಷ್ಯ ಉಜ್ವಲಗೊಳಿಸಲು ಪ್ರತಿಯೊಬ್ಬ ವಿದ್ಯಾರ್ಥಿ ಪ್ರಯತ್ನಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.
ಇಲ್ಲಿನ ಜೇಡರ ದಾಸಿಮಯ್ಯ ದೇವಸ್ಥಾನ ಆವರಣದಲ್ಲಿ ಜಿಲ್ಲೆಗೆ ಪಿಯು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಚೇತನ ಸಿದ್ಧಾಪೂರನಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ಈ ಸಂದರ್ಭದ ಭವಿಷ್ಯ ಬದುಕಿನ ನಿರ್ಣಾಯಕ ಪಾತ್ರ ವಹಿಸಲಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರುವ ಸಮಯವಾಗಿರುತ್ತದೆ. ಪ್ರತಿಯೊಬ್ಬರ ಜಾಣ್ಮೆಯ ಪರೀಕ್ಷೆ ಸಂದರ್ಭವೆಂದರು.
ಇದೇ ಸಂದರ್ಭ ವಿರುಪಾಕ್ಷಪ್ಪ ಕೊಕಟನೂರ, ಶಂಕರ ಸೊರಗಾಂವಿ, ರಾಜಶೇಖರ ಮಾಲಾಪುರ, ಸೋಮನಾಥ ಗೊಂಬಿ, ರಾಜು ಅಂಬಲಿ, ಮಾಲಾ ನಿಜಲಿಂಗಪ್ಪ ಬಾವಲತ್ತಿ, ಶಾಂತಾ ಮಂಡಿ, ರಾಜು ಬೀಳಗಿ, ಶೀಲವಂತ, ಸುರೇಶ ಅಕ್ಕಿವಾಟ, ಸುರೇಶ ಬೀಳಗಿ, ರಾಜು ಬಾಣಕಾರ, ಪ್ರಕಾಶ ಮಂಡಿ, ಸಿದ್ರಾಯಪ್ಪ ಶೀಲವಂತ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ : +91 9902523698

Social Plugin