ಕೇಂದ್ರ ಸರಕಾರದ ಸಹಾಯಧನ ಮಂಜೂರಾತಿಗೆ ಆಗ್ರಹಿಸಿ ಸನ್ 17-18 ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಪಾಲಾನುಭವಿಗಳು ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಮನವಿ ಅರ್ಪಿಸಿದರು.
ಸಹಾಯಧನ ಬಿಡುಗಡೆ ಮಾಡಲು ಮನವಿ
ರಬಕವಿ-ಬನಹಟ್ಟಿ,ಜು2: ಕೇಂದ್ರ ಸರಕಾರದ ಸಹಾಯಧನ ಮಂಜೂರಾತಿಗೆ ಆಗ್ರಹಿಸಿ ಸನ್ 17-18 ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಪಾಲಾನುಭವಿಗಳು ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ಬಸವರಾಜ ಗುಡೋಡಗಿ, ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಸನ್ 17-18 ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದ 1 ಲಕ್ಷ 20 ಸಾವಿರ ಹಾಗೂ ಕೇಂದ್ರ ಸರ್ಕಾರದಿಂದ 1 ಲಕ್ಷ 50 ಸಾವಿರ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ವಾಜಪೇಯ ವಸತಿ ಯೋಜನೆಯಡಿಯಲ್ಲಿ 224 ಫಲಾನುಭವಿಗಳಿಗೆ ತಲಾ 2 ಲಕ್ಷ 70ಸಾವಿರ ಸಹಾಯಧನ ಮಜೂರಾಗಿತ್ತು.
ಅದರಲ್ಲಿ ಇವರೆಗೆ ರಾಜ್ಯಸರ್ಕಾರದ 1 ಲಕ್ಷ 20 ಸಾವಿರ ಸಹಾಯಧನ ಮಾತ್ರ ಫಲಾನುಭವಿಗಳಿಗೆ ಬಂದಿರುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಬರಬೇಕಾದ 1 ಲಕ್ಷ 50 ಸಾವಿರ ಸಹಾಯಧನ ಇದುವರೆಗೂ ಬಂದಲ್ಲ. ಇದಕ್ಕೆ ಸಂಬಂದಪಟ್ಟ ಫಲಾನುಭವಿಗಳು ಸಾಲ ಸೋಲ ಮಾಡಿ ಮನೆ ಕಟ್ಟಿಕೊಂಡು ಪರದಾಡುತ್ತಿದ್ದು, ಆದಕಾರಣ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೇಂದ್ರ ಸರಕಾರದ 1 ಲಕ್ಷ 50 ಸಾವಿರ ಸಹಾಯಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಮಾಜಿ ನಗರಸಭೆ ಅಧ್ಯಕ್ಷರಾದ ಸಂಗಪ್ಪ ಕುಂದಗೋಳ, ನಗರಸಭಾ ಸದಸ್ಯ ರಾಜು ಶಾಸ್ತ್ರಿ ಗೊಲ್ಲರ್, ಶಂಕರ ಹಿಪ್ಪರಗಿ, ದುಂಡಪ್ಪ ಹೊಸೂರ ಹಾಗೂ ಫಲಾನುಭವಿಗಳಾದ ಬಸವರಾಜ ಮುರಗುಂಡಿ, ಬಸವರಾಜ ಮಾಹಾಲಿಂಗಪುರ, ಸುರೇಶ ಕಳ್ಳಿಗುದ್ದಿ ಸೇರಿದಂತೆ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿನ ಪಲಾನುಭವಿಗಳು ಇದ್ದರು
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin