ರಬಕವಿಯಲ್ಲಿ ಅಂದಾಜು 75 ಲಕ್ಷ ವೆಚ್ಚದ ರಬಕವಿಯಿಂದ ಗೋಲಭಾಂವಿ ರಸ್ತೆ ಸುಧಾರಣೆಯ ಕಾಮಗಾರಿಗೆ ಭೂಮಿಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ...
ಗುಣಮಟ್ಟದ ಕಾಮಗಾರಿ ನಡೆಸಿ : ಸವದಿ
ರಬಕವಿ-ಬನಹಟ್ಟಿ,ಜು3: ರಸ್ತೆ ಕಾಮಗಾರಿ ಮಾಡುವಾಗ ಗುಣಮಟ್ಟವನ್ನು ಕಾಯ್ದುಕೊಳ್ಳಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯಲ್ಲಿ ಅಂದಾಜು 75 ಲಕ್ಷ ವೆಚ್ಚದ ರಬಕವಿಯಿಂದ ಗೋಲಭಾಂವಿ ರಸ್ತೆ ಸುಧಾರಣೆಯ ಕಾಮಗಾರಿಗೆ ಭೂಮಿಪೂಜೆ ನೆರವೆರಿಸಿ ಮಾತನಾಡಿದರು.
ಯಡಿಯೂರಪ್ಪ ನೇತೃತ್ವದ ಸರಕಾರ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆ ಗುಣಮಟ್ಟದ್ದಾಗಿದ್ದರೆ ಯಾವುದೇ ಅಪಘಾತ ಸಂಭವಿಸುವುದಿಲ್ಲ ಎಂದರು.
ಈ ಸಂಧರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಪರಶುರಾಮ ಕಾಕಂಡಕಿ, ಪರಪ್ಪ ಪೂಜೇರಿ, ಯಲ್ಲಪ್ಪ ಗೋಸರವಾಡ, ನಿಂಗಪ್ಪ ನಾಯಿಕ, ಬಸು ಗೋಪಾಳಿ, ಈಶ್ವರ ಹೂಗಾರ, ಮಾಯಪ್ಪ ಅಡಿಹುಡಿ, ಲಕ್ಕಪ್ಪ ಮುಶಗುಪ್ಪಿ, ಬಸು ಪಾಟೀಲ ಸೇರಿದಂತೆ ಅನೇಕರು ಇದ್ದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin