ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮದ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿಗೆ ಮನವಿ ಅರ್ಪಿಸಿದರು.
ಒತ್ತಡದ ಕಾರ್ಯಗಳಲ್ಲಿ ಆಶಾ ಕಾರ್ಯಕರ್ತರಿಗೆ ಸರ್ಕಾರ ನೆರವಾಗಲಿ
ರಬಕವಿ-ಬನಹಟ್ಟಿ,17: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ತೀವ್ರ ಒತ್ತಡದ ಕಾರ್ಯಗಳಲ್ಲಿ ಸಮಯ ಮೀರಿ ಕೆಲಸ ನಿರ್ವಹಿಸುತ್ತಿರುವ ನಮಗೆ ಸಮರ್ಪಕವಾದ ಸಂಬಳ ದೊರಕದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕುಟುಂಬ ನಿರ್ವಹಣೆಗಾದಷ್ಟು ವೇತನ ನೀಡಲೆಂದು ಕಲ್ಪನಾ ಪಾಟೀಲ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಹಲವಾರು ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕು, ಜಿಲ್ಲಾಮಟ್ಟದಿಂದ ಸಚಿವರ ಗಮನ ಸೆಳೆಯುವಲ್ಲಿ ಆಶಾ ಕಾರ್ಯಕರ್ತರು ಯಶಸ್ವಿ ಕಂಡಿದ್ದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವದು ಸಲ್ಲದು. ಕನಿಷ್ಠ ಬೇಡಿಕೆಗಳನ್ನು ಪೂರೈಸುವಲ್ಲಿ ಸರ್ಕಾರ ಮೀನಾಮೇಷ ಮಾಡಬಾರದೆಂದರು. 
ಇದೇ ಸಂದರ್ಭ ಸುಜಾತಾ ಜಿನ್ನಪ್ಪ ಹೊಸೂರ, ಲಕ್ಷ್ಮೀ ಕಾಂಬಳೆ ಸೇರಿದಂತೆ ಅನೇಕ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ  +91 9902523698