ರಬಕವಿ-ಬನಹಟ್ಟಿ ತಾಲೂಕಿನ ಪಂಚಮಸಾಲಿ ಸಮಾಜದ ನೂತನ ಅಧ್ಯಕ್ಷರಾದ ಶ್ರೀಶೈಲ ದಲಾಲ ಅವರಿಗೆ ಶಾಸಕ ಸಿದ್ದು ಸವದಿ ಸನ್ಮಾನಿಸಿದರು.
ಸಮಾಜ ಅಭಿವೃದ್ಧಿಗೆ ಶ್ರಮಿಸಿ-ಸವದಿ
ರಬಕವಿ-ಬನಹಟ್ಟಿ,ಜು18: ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಉತ್ತಮ ಸಮಾಜಕ್ಕಾಗಿ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿಯ `ಹಸಿರು ಸಿರಿ’ ಉದ್ಯಾನವನದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಶೈಲ ದಲಾಲ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಸ್ವಂತ ಸಮಾಜವನ್ನು ಪ್ರೀತಿಸುವದರ ಜೊತೆಗೆ ಇತರೆ ಸಮಾಜವನ್ನು ಗೌರವಿಸುವ ಮೂಲಕ ಮಾನವೀಯ ಮೌಲ್ಯಗಳೊಂದಿಗೆ ಜನಸೇವೆಗೆ ಮುಂದಾಗಬೇಕೆಂದರು.
ಇದೇ ಸಂದರ್ಭ ಧರೆಪ್ಪ ಉಳ್ಳಾಗಡ್ಡಿ, ಬಾಬಾಗೌಡ ಪಾಟೀಲ, ಸುರೇಶ ಅಕ್ಕಿವಾಟ, ಆನಂದ ಕಂಪು, ಬಸವರಾಜ ದಲಾಲ, ಲಕ್ಕಪ್ಪ ಪಾಟೀಲ, ಶಂಕರ ಮಲ್ಲಣ್ಣವರ, ಮಹಾದೇವ ಧೂಪದಾಳ ಇದ್ದರು.