ಬನಹಟ್ಟಿ ಲಕ್ಷ್ಮೀ ನಗರದ ಉರ್ದುಶಾಲೆಯಲ್ಲಿ 4 ಕೊಠಡಿಗಳಿಗೆ ಶಾಸಕ ಸಿದ್ದು ಸವದಿ ಭೂಮಿಪೂಜೆ ನೆರವೇರಿಸಿದರು.
ಪ್ರೌಢಶಾಲಾ ಕೊಠಡಿಗೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ರಬಕವಿ-ಬನಹಟ್ಟಿ,ಜು18: ಲಕ್ಷ್ಮೀ ನಗರದ ಸರ್ಕಾರಿ ಉರ್ದುಶಾಲೆಯ ಪ್ರೌಢಶಾಲಾ ವಿಭಾಗದ 4 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ತೇರದಾಳ ಶಾಸಕ ಸಿದ್ದು ಸವದಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. 
ಶನಿವಾರ ಬೆಳಿಗ್ಗೆ ನಡೆದ ಭೂಮಿಪೂಜೆಯು ಅಂದಾಜು 50 ಲಕ್ಷ ರೂ. ಅನುದಾನದ ಕಾಮಗಾರಿಯಾಗಿದೆ. ಶಾಲಾ ಕೊಠಡಿಗಳ ಕಾಮಗಾರಿ ನಿರ್ಮಾಣ ನಿಗದಿ ಅವಧಿಯೊಳಗೆ ಪೂರ್ಣಗೊಳಿಸಲು ಮತ್ತು ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಶಿಕ್ಷಣ ವ್ಯವಸ್ಥೆಗೆ ಸಂಪೂರ್ಣ ಸಹಕಾರ ನೀಡಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಅದರಂತೆ ಎಲ್ಲರೂ ಶೈಕ್ಷಣಿಕ ಅಭಿವೃದ್ಧಿಗಾಗಿ ಅತ್ಯಂತ ಮುತುವರ್ಜಿವಹಿಸಬೇಕು. ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ. ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಸುರೇಶ ಅಕ್ಕಿವಾಟ, ನಗರಸಭಾ ಸದಸ್ಯರಾದ ಗೌರಿ ಮಿಳ್ಳಿ, ಮುರಾದ ಮೋಮಿನ್, ನಿಜಾಮ ಮುಧೋಳ, ಬಾರಿಗಡ್ಡಿ, ಹಾರೂನ ಸಾಂಗ್ಲೀಕರ ಉಪಸ್ಥಿತರಿದ್ದರು.