ಬಡಿಗೆತನ ಕೆಲಸದೊಂದಿಗೆ ಪಿಯು ಪರೀಕ್ಷೆಯಲ್ಲಿ ಶೇ.95 ಅಂಕ ಗಳಿಸಿ ಸಾಧನೆ ಮೆರೆದ ಅಖಿಲೇಶ ಬಡಿಗೇರ.
ಕಡು ಬಡತನದಲ್ಲೂ ಕಾಯಕದೊಂದಿಗೆ ಛಲ ಬಿಡದೇ ಶಿಕ್ಷಣದಲ್ಲಿ ಸಾಧನೆ...
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು17: ಕಡು ಬಡತನ, ಕಷ್ಟಗಳ ನಡುವೆಯೂ ವಿದ್ಯಾರ್ಥಿಯೋರ್ವ ಛಲ ಬಿಡದೇ ಬನಹಟ್ಟಿಯ ಎಸ್‍ಆರ್‍ಎ ಕಾಲೇಜಿನ ದ್ವಿತೀಯ ಪಿಯುಸಿ ಶಿಕ್ಷಣ ವಿಭಾಗದಲ್ಲಿ ಶೇ.95 ರಷ್ಟು ಅಂಕಗಳನ್ನು ಪಡೆದು ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ವಿದ್ಯಾರ್ಥಿ ಅಖಿಲೇಶ ಬಡಿಗೇರ ಪಿಯು ಪರೀಕ್ಷೆಯಲ್ಲಿ ಅಂಕ ಗಳಿಸಿ ಉತ್ತೀರ್ಣನಾಗುವ ಮೂಲಕ ಬಡವಿದ್ಯಾರ್ಥಿಗಳಿಗೆ ಅದರಲ್ಲೂ ಸ್ವತಃ ದುಡಿಮೆಯಿಂದ ಇಷ್ಟೊಂದು ಸಾಧನೆ ಮಾಡಿರುವದು ವಿಶೇಷ. ಉತ್ತಮ ಅಂಕ ಪಡೆದಿರುವ ಅಖಿಲೇಶ ಬಡತನ ಶಾಪವಲ್ಲ. ಬಡತನವನ್ನು ಮೆಟ್ಟಿ ನಿಂತರೆ ಸಾಧನೆ ಹಾದಿ ದೂರವಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ.
ಆತನ ತಂದೆ ವಯೋಸಹಜವಾಗಿದ್ದರಿಂದ ದುಡಿಯಲು ಸಾಧ್ಯವಾಗುತ್ತಿಲ್ಲ. ತಾಯಿ ಮನೆಗೆಲಸದಲ್ಲಿದ್ದಾಳೆ. ತನ್ನ ಅಣ್ಣನೊಂದಿಗೆ ಕುಟುಂಬದ ನೊಗ ಹೊತ್ತಿರುವ ಅಖಿಲೇಶ ಮೂಲ ಕಾಯಕವಾಗಿರುವ ಬಡಿತನದೊಂದಿಗೆ ಅಣ್ಣನೊಂದಿಗೆ ದಿನಂಪ್ರತಿ ಕೆಲಸಕ್ಕೆಂದು ತೆರಳುತ್ತಾನೆ.
ಗ್ರಾಮದಲ್ಲಿರುವ ಮನೆಗಳ ಪತ್ರಾಸ ಛಾವಣಿ, ತೋಟದಲ್ಲಿನ ಶೆಡ್ ನಿರ್ಮಿಸುವದು ಹೀಗೆ ಕಾಲೇಜು ಬಿಟ್ಟ ನಂತರದ ಸಮಯದಲ್ಲಿ ಕೆಲಸಕ್ಕೆಂದು ತೆರಳುತ್ತೇನೆ ಎನ್ನುತ್ತಾನೆ ವಿದ್ಯಾರ್ಥಿ ಅಖಿಲೇಶ. ದಿನಂಪ್ರತಿ ಬೆಳಿಗ್ಗೆ ಹಾಗು ರಾತ್ರಿ ಹೊತ್ತು 4 ಗಂಟೆ ಅಭ್ಯಾಸ ಮಾಡುವದಾಗಿ ಹೇಳಿತ್ತಾನೆ.
ಸ್ಕಾಪರ್‍ಷಿಪ್ ಜೀವಾಳ: ಸ್ವಂತ ಸೂರು ಇಲ್ಲದೇ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ಈ ಕುಟುಂಬದಲ್ಲಿ ಸಹೋದರನೋರ್ವನೊಂದಿಗೆ ಮೂವರು ತಂಗಿಯವರು ಒಟ್ಟಾರೆ ಏಳು ಜನರ ಕುಟುಂಬದ ಜವಾಬ್ದಾರಿ ಈತನ ಮೇಲಿದೆ. ಹೀಗಿರುವಾಗ ಬಡಿಗತನದಿಂದ ಬರುವ ಹಣದಲ್ಲಿ ಕುಟುಂಬ ನಿರ್ವಹಿಸಿ, ಆತನ ವ್ಯಾಸಾಂಗಕ್ಕೆ ಸರ್ಕಾರದಿಂದ ಬರುವ ಸ್ಕಾಲರ್‍ಷಿಪ್ ಜೀವಾಳವಾಗಿದೆ ಎನ್ನುತ್ತಾನೆ ಅಖಿಲೇಶ.
ಪಿಯು ಪರೀಕ್ಷೆಯಲ್ಲಿ ಕನ್ನಡ-95, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100, ಇಂಗ್ಲೀಷ್-94, ಅರ್ಥಶಾಸ್ತ್ರ-93, ಸಾಮಾನ್ಯ ವಿಜ್ಞಾನ-87 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಅಖಿಲೇಶ ಉನ್ನತ ವ್ಯಾಸಾಂಗ ಮಾಡುವ ಮೂಲಕ ಕೆಎಎಸ್ ಪರೀಕ್ಷೆ ಬರೆಯುವ ಮಹದಾಸೆ ಈತನದ್ದಾಗಿದೆ. ಈತನಿಗೆ ಸಹಾಯ ಮಾಡಲಿಚ್ಚೀಸುವವರು 63600-59132 ನಂಬರ್ ಸಂಪರ್ಕಿಸಬಹುದು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin