ರಬಕವಿಯ ಬಿಸಿಎಂ ಹಾಸ್ಟೇಲ್‍ಗೆ ಭೇಟಿ ನೀಡಿದ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಕ್ವಾರಂಟೈನ್‍ನಲ್ಲಿದ್ದವರಿಗೆ ಧೈರ್ಯ ತುಂಬಿದರು.
ಕ್ವಾರಂಟೈನ್‍ಗೆ ಭೇಟಿ ನೀಡಿ ಧೈರ್ಯ ತುಂಬಿದ ಉಪವಿಭಾಗಾಧಿಕಾರಿ
ರಬಕವಿ-ಬನಹಟ್ಟಿ,ಜು20: ರಬಕವಿಯ ಬಿಸಿಎಂ ಹಾಸ್ಟೇಲ್‍ನಲ್ಲಿರುವ ಕೊರೊನಾ ರೋಗದ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದ ಜಾಗೆಗೆ ತೆರಳಿದ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿ ಬಗ್ಗೆ ಅವಲೋಕಿಸಿದರು.
ಸೋಮವಾರದಂದು ಬೆಳಿಗ್ಗೆ ಭೇಟಿ ನೀಡಿ ಸುಮಾರು 30 ನಿಮಿಷ ಅಲ್ಲಿನ ಸಮಸ್ಯೆಗಳ ಬಗ್ಗೆ ವಿಚಾರಿಸಿ ಪರಿಶೀಲನೆ ನಡೆಸಿದ್ದಾರೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಸಿದ್ದು ಹುಲ್ಲೋಳ್ಳಿ ಪರಿಶೀಲನೆ ನಡೆಸಿದರು.
50 ಕ್ಕೂ ಅಧಿಕ ಜನರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಿಸಬೇಕು. ಯಾವದೇ ಕಾರಣಕ್ಕೂ ಯಾರೂ ಹೆದರುವ ಅಗತ್ಯವಿಲ್ಲವೆಂದು ಜನರಿಗೆ ಧೈರ್ಯ ತುಂಬಿದರು.
ಇದೇ ಸಂದರ್ಭ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಸಿಪಿಐ ಜೆ. ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ವೈದ್ಯಾಧಿಕಾರಿ ನದಾಫ್, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಮಂಜುನಾಥ ನೀಲನ್ನವರ ಉಪಸ್ಥಿತರಿದ್ದರು.


- ಶೀಘ್ರ ಸುದ್ದಿಗಳು ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ ಹಾಗೂ ಫಾಲೋ  & ಸಬ್ಸ್ಕ್ರೈಬ್