ತೇರದಾಳ ಪಟ್ಟಣದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತು ಸಂತೆ ಸೇರಿರುವುದು.
ಸಾಮಾಜಿಕ ಅಂತರವನ್ನು ಮರೆತು ಸಂತೆ ಸೇರಿದ ಜನ
ತೇರದಾಳ ಮತಕ್ಷೇತ್ರದ ಕೇಂದ್ರ ಸ್ಥಾನವಾದ ತೇರದಾಳ ಪಟ್ಟಣದಲ್ಲಿ ಕೊರೊನಾ ಮಹಾಮಾರಿ ಕೇಕೇ ಹಾಕುತ್ತಿದ್ದು ಪಟ್ಟಣದ ಜನತೆ ಭಯದಲ್ಲಿದ್ದರು ಸಾಮಾಜಿಕ ಅಂತರವನ್ನು ಮರೆತು ಸಂತೆ ಸೇರುತ್ತಿರುವುದು ಆತಂಕಕೆಡೆಮಾಡಿ ಕೊಡುತ್ತಿದೆ.
ಕೊರೊನಾ ಪಾಸಿಟೀವ್ ಹೆಚ್ಚು ಕೇಸ್‍ಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕರು ಮಾತ್ರ ತಮ್ಮ ಆರೋಗ್ಯದ ಕಡೆ ಲಕ್ಷವಹಿಸದೇ ಇರುವುದು ಆತಂಕದ ಸಂಗತಿ. ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಕೋವಿಡ್-19ನ ಭೀತಿ ಹೆಚ್ಚುತ್ತಿದ್ದರು ಕೂಡಾ ತೇರದಾಳ ಪಟ್ಟಣಕ್ಕೆ ಮಾತ್ರ ಸುಳಿದಿರಲಿಲ್ಲ. ಆದರೆ ಕಳೆದ ಎಂಟು ದಿನಗಳಲ್ಲಿ ಐದು ಪಾಸಿಟೀವ್ ಕೇಸ್‍ಗಳು ಪತ್ತೇಯಾಗಿದ್ದು ಅದರಲ್ಲಿ ಕೊರೊನಾ ಪಾಸಿಟೀವ್ ಧೃಡಪಟ್ಟಿರುವ ವ್ಯಕ್ತಿ ಮೃತಪಟ್ಟಿದ್ದು ಇನ್ನಷ್ಟು ಜನರಲ್ಲಿ ಭಯವನ್ನುಂಟು ಮಾಡಿದೆ.
ಅಂಬೇಡ್ಕರ ಸರ್ಕಲ್, ಜವಳಿ ಬಜಾರ, ಹಳೇಪೇಠ ಭಾಗ, ಸಿದ್ದೇಶ್ವರ ಗಲ್ಲಿಯಲ್ಲಿ ಹಾಗೂ ದೇವರಾಜ ನಗರದಲ್ಲಿ ಕೊರೊನಾ ಪಾಸಿಟೀವ್ ಕೇಸ್‍ಗಳು ಪತ್ತೇಯಾಗಿದ್ದರೆ, ಜವಳಿ ಬಜಾರದಲ್ಲಿನ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು ಜನರಲ್ಲಿ ಭಯವನ್ನುಂಟು ಮಾಡಿದೆ. ಸೋಂಕಿತರ ಸಂಪರ್ಕದಲ್ಲಿರುವ ಜನರನ್ನು ಸ್ಥಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಸುಮಾರು 9ಜನರು ಸಾಂಸ್ಥಿಕ ಕ್ವಾರಂಟೈನ್‍ದಲ್ಲಿ ಇದ್ದಾರೆ. ಅವರ 14 ದಿನಗಳ ಅವಧಿಯು ಇಂದು ಸೋಮವಾರಕ್ಕೆ ಮುಕ್ತಾಯವಾಯಿತು. ಅವರ ವರದಿ ಮಾತ್ರ ಬರಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮತ್ತು ರಬಕವಿಯ ಓಬಿಸಿ ಹಾಸ್ಟೇಲ್‍ದಲ್ಲಿ ಸುಮಾರು 15ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆರೋಗ್ಯ ಮತ್ತು ಕಂದಾಯ, ಪೋಲಿಸ್ ಇಲಾಖೆಯವರು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಸಾಕಷ್ಟು ಜನರಿಗೆ ಬೆತ್ತದ ರುಚಿಯನ್ನು ತೋರಿಸಿದರೂ ಜನರು ಮಾತ್ರ ಬೆಕಾ ಬಿಟ್ಟಿಯಾಗಿ ತಿರುಗುವುದನ್ನು ಮಾತ್ರ ಬಿಟ್ಟಿಲ್ಲ. ಹಾಗೂ ಮಾಸ್ಕ್ ಧರಿಸುವಂತೆ ಪುರಸಭೆ ಅಧಿಕಾರಿಗಳು ಮಾಸ್ಕ್ ಧರಿಸದವರಿಗೆ ದಂಡವನ್ನು ಸಹ ಹಾಕಿದರೂ ಮಾಸ್ಕ್ ಧರಿಸದಿರುವುದು ಕಾಣಬರುವುದು ಸರ್ವೆ ಸಾಮಾನ್ಯ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮಾತ್ರ ಮರೆತು ತಮ್ಮ ಜೀವನಕ್ಕೆ ಕುತ್ತನ್ನು ತಾವೇ ತಂದುಕೊಳ್ಳುತ್ತಿದ್ದಾರೆ. ಇದನ್ನೆಲ್ಲವನ್ನು ನೋಡಿದರೆ ಇವರೆಲ್ಲರನ್ನು ಆ ದೇವರೇ ಕಾಯಬೇಕು.
ಇನ್ನಷ್ಟು ಜನರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು ಹೊರಗಡೆ ತಿರುಗಾಡುತ್ತಿರುವುದು ಜನರಲ್ಲಿ ಭಯವನ್ನುಂಟು ಮಾಡಿದೆ. ಅಧಿಕಾರಿಗಳು ಅವರನ್ನು ಗುರುತಿಸಿ ಕ್ವಾರಂಟೈನ್ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯ.
Social Plugin