ತೇರದಾಳ ಪಟ್ಟಣದಲ್ಲಿ ಲಾಕ್‍ಡೌನ್ ಕಪ್ರ್ಯೂದಿಂದಾಗಿ ನಿಶ್ಯಬ್ದವಾಗಿತ್ತು.
ತೇರದಾಳ ; ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರಕಾರ ರವಿವಾರ ಕಪ್ರ್ಯೂ ಜಾರಿ ಮಾಡಿದ್ದರಿಂದ ಪಟ್ಟಣದಲ್ಲಿ ರವಿವಾರ ಸಂಪೂರ್ಣವಾಗಿ ನಿಶ್ಯಬ್ದವಾಗಿತ್ತು.
ಮೊದಲ ಲಾಕ್‍ಡೌನ್‍ದಲ್ಲಿ ಜನ ಲಾಕ್ ಡೌನ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡು ಬರುತ್ತಿತ್ತು. ಈ ಮಧ್ಯದ ಅವಧಿಯಲ್ಲಿ ಕೊರೊನಾ ಕಲಿಸಿದ ಪಾಠದಿಂದಾಗಿ ಜನರು ಭಯಗೊಂಡು ಇಂದು ಯಾರೂ ಹೊರಗೆ ಬರಲಿಲ್ಲ. ಸರಕಾರದ ಆದೇಶದಂತೆ ಪ್ರತಿ ದಿನ ಸಾಯಂಕಾಲ 6ಗಂಟೆಯಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗುತ್ತಿರುವಂತೆ ಶನಿವಾರ ರಾತ್ರಿ 6ಗಂಟೆಯಿಂದ ಎಲ್ಲ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದು ರವಿವಾರ ಸಂಪೂರ್ಣವಾಗಿ ಬಂದ್ ಆಗಿದ್ದವು. ವಾಹನಗಳ ಸಂಚಾರ ನಿಂತಿತ್ತು, ಅವಶ್ಯಕ ವಸ್ತುಗಳ ಸಾಗಾಣಿಕೆ ವಾಹನಗಳು ಮಾತ್ರ ಪ್ರಾರಂಭವಾಗಿದ್ದವು. ಎಲ್ಲ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಯಾವುದೇ ರೀತಿಯ ವಾಹನಗಳು ರಸ್ತೆಯ ಮೇಲೆ ಓಡಾಡುವುದು ಕಂಡು ಬರಲಿಲ್ಲ. ಅನಾವಶ್ಯಕ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಇಂದು ಎಲ್ಲಿಯೂ ಕಂಡು ಬರಲಿಲ್ಲ. ಸಾರ್ವಜನಿಕರು ಮನೆಯಲ್ಲಿಯೇ ಉಳಿದಿದ್ದರು. ಯಾರೂ ಯಾವುದೇ ನೆಪ ಹೇಳಿ ಹೊರಗೆ ಮಾತ್ರ ಬರಲಿಲ್ಲ. ಮುಂಜಾನೆಯಿಂದ ಸಾಯಂಕಾಲದವರೆಗೆ ಯಾರು ಹೊರಗೆ ಬರಲಿಲ್ಲ. ಮುಂಜಾನೆಯಿಂದ ತರಕಾರಿ ಮಾರಾಟಗಾರರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರು ಹಾಗೂ ಚಹಾದ ಅಂಗಡಿಗಳು ಸೇರಿದಂತೆ ಯಾವುದೇ ರೀತಿಯ ಅಂಗಡಿಗಳು ತೆರದಿರಲಿಲ್ಲ. ಜನರಿಂದ ತುಂಬಿರುವ ಕೆಲವು ಪ್ರದೇಶಗಳು ಸ್ತಬ್ದವಾಗಿದ್ದವು. ಇಂದು ತೇರದಾಳ ಪಟ್ಟಣ ಸಂಪೂರ್ಣವಾಗಿ ಬಂದ್ ಆಗಿತ್ತು. ಪೋಲಿಸ್‍ರು ಪಟ್ಟಣದ ತುಂಬೆಲ್ಲ ಸಂಚರಿಸಿ ಗಸ್ತು ತಿರುಗಿತ್ತಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698



Social Plugin