ಕೊರೊನಾ ರೋಗಕ್ಕೆ ಡಾ. ಗಿರಿಧರ ಕಜೆಯವರ ಸಂಶೋಧಿತ ಯಶ್ಸವಿ ಆಯುರ್ವೇದ ಔಷಧಿಯನ್ನು ಸೊಂಕಿತರಿಗೆ ಉಪಚರಿಸುವಂತೆ ಆಗ್ರಹಿಸಿ ರಬಕವಿ-ಬನಹಟ್ಟಿ ತಾಲ್ಲೂಕು ಘಟಕದ ಶ್ರೀರಾಮ ಸೇನೆ ಕಾರ್ಯಕರ್ತರು ರಬಕವಿ-ಬನಹಟ್ಟಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದರು. 
ಆಯುರ್ವೇದ ಔಷಧ ಬಳಕೆಗೆ ಶ್ರೀರಾಮ ಸೇನೆ ಆಗ್ರಹ
ರಬಕವಿ-ಬನಹಟ್ಟಿ,ಜು25: ಕೊರೊನಾ ರೋಗಕ್ಕೆ ಡಾ. ಗಿರಿಧರ ಕಜೆಯವರ ಸಂಶೋಧಿತ ಯಶಸ್ವಿ ಆಯುರ್ವೇದ ಔಷಧಿಯನ್ನು ಸೊಂಕಿತರಿಗೆ ಉಪಚರಿಸುವಂತೆ ಆಗ್ರಹಿಸಿ ರಬಕವಿ-ಬನಹಟ್ಟಿ ತಾಲ್ಲೂಕು ಘಟಕದ ಶ್ರೀರಾಮ ಸೇನೆ ಕಾರ್ಯಕರ್ತರು ರಬಕವಿ-ಬನಹಟ್ಟಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಬಸವರಾಜ ಗಾಯಕವಾಡ, ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ ಅವರಿಗೆ ಮನವಿ ಅರ್ಪಿಸಿ ಮಾತನಾಡಿ, ಕೋವಿಡ್-19 ಜಗತ್ತಿಗೆ ಮಾರಕವಾಗಿ ಕಾಡುತ್ತಿದ್ದು, ಇದಕ್ಕೆ ಔಷಧಿ ಕಂಡು ಹಿಡಿಯಲು ಸಂಶೋಧಕರು, ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದರೂ ಯಾವುದೇ ಫಲ ನೀಡದ ಸಂದರ್ಭದಲ್ಲಿ ಭಾರತದ ಸಾವಿರಾರು ವರ್ಷದ ಪುರಾತನ ವೈಜ್ಞಾನಿಕ ಆಯುರ್ವೇದದ ಔಷÀಧಿಯ ಮೂಲಕ ರೋಗಿಗಳನ್ನು ಗುಣಪಡಿಸಿದ ಡಾ. ಗಿರಿಧರ ಕಜೆ ಔಷಧಿಯನ್ನು ಬಳಸಿ ಪರಿಣಾಮಕಾರಿಯಾಗಿ ಗುಣಮುಖರಾದರೂ ತಮ್ಮ ಸರಕಾರ ವ್ಯಾಪಕವಾಗಿ ರೋಗಿಗಳಿಗೆ ನೀಡದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಉಹಾಪೋಹಗಳಿಗೆ ಕಾರಣವಾಗುತ್ತಿದೆ. ಜೊತೆಗೆ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಮಾಯಕಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಸಾಯುವ ಪರಸ್ಥಿತಿ ನಿರ್ಮಾಣವಾದರೂ ಈ ಔಷಧಿಯನ್ನು ಬಳಸುತ್ತಿಲ್ಲ ಏಕೆ ಎನ್ನುವುದು ತಿಳಿಯುತ್ತಿಲ್ಲ. ಯಾವುದೇ ಅಡ್ಡ ಪರಿಣಾಮವಿಲ್ಲದೇ ಅತ್ಯಂತ ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರಿಗೂ ಕೈಗೆಟುಕುವ ಈ ಔಷಧಿ ತಕ್ಷಣವೇ ಆಸ್ಪತ್ರೆಗೆ ಮಾರುಕಟ್ಟೆಗೆ ಬಡ ರೋಗಿಗಳಿಗೆ ದೊರಕುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು. 
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನಪ್ಪ ಕೋರಿ, ತಾಲ್ಲೂಕು ಅಧ್ಯಕ್ಷ ಪ್ರದೀಪ ದೇಶಪಾಂಡೆ, ಸತೀಶ ರೇವಣಿ, ಆಕಾಶ ಮುಳಗಲ್ಲಿ, ಸಂಜು ರಾವಳ, ಶ್ರೀಶೈಲ ಮೂಲಿಮನಿ, ಅನೀಲ ಬಾಂಡೆಗಾರ, ಕುಮಾರ ಹಂಜಿ ಸೇರಿದಂತೆ ಅನೇಕರು ಇದ್ದರು.