ತೇರದಾಳ ಪಟ್ಟಣದಲ್ಲಿ ನಿರಂತರವಾಗಿ ಸುರಿದ ಮಳೆಯ ದೃಶ್ಯ

ತೇರದಾಳದಲ್ಲಿ ನಿರಂತರ ಸುರಿದ ಮಳೆ

ತೇರದಾಳ : ಪಟ್ಟಣದಲ್ಲಿ ನಿರಂತರವಾಗಿ ಮುಂಜಾನೆಯಿಂದ ಸಾಯಂಕಾಲದವರೆಗೆ ಸುರಿದ ಪುನರ್ವಸು ಮಳೆಯಿಂದ ರೈತರಲ್ಲಿ ಹರ್ಷ ಮೂಡಿಸಿದೆ ಎಂದು ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ ತಿಳಿಸಿದ್ದಾರೆ.

   ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಾತ್ರಿಯಿಂದ ಜಿಟಿ ಜಿಟಿಯಾಗಿದ್ದ ಮಳೆ ಇದ್ದು, ಇಂದು ಮುಂಜಾನೆ 10ಗಂಟೆ ಸುಮಾರಿನಿಂದ ಪ್ರಾರಂಭವಾದ ಮಳೆಯು ಸಾಯಂಕಾಲದವರೆಗೂ ನಿರಂತರವಾಗಿ ಸುರಿಯುತ್ತಿತ್ತು ಇದರಿಂದ ಬಿತ್ತಿದ ಬೆಳೆಗೆ ಉತ್ತಮವಾಗಿದೆ ಇದರಿಂದ ರೈತರು ತುಂಬಾ ಹರ್ಷವಾಗಿದ್ದಾರೆ ಎಂದು ಅವರು ತಿಳಿಸಿದರು. ಈಗಾಗಲೆ ಮೆಕ್ಕೆಜೋಳ, ಹೆಸರು, ಉದ್ದ ಸೇರಿದಂತೆ ಮುಂಗಾರು ಬೆಳೆಗಳಿಗೆ ಈ ಮಳೆ ಬಹಳಷ್ಟು ಅನುಕೂಲವಾಗಿದೆ. ಕಳೆದ ಮೂರುನಾಲ್ಕು ದಿನಗಳಿಂದ ಮೊಡ ಕವಿದ ವಾತಾವರಣವಿತ್ತು ಆದರೆ ನಿನ್ನೆಯಿಂದ ಪ್ರಾರಂಭವಾದ ಮಳೆಯು ರೈತರಲ್ಲಿ ಹರ್ಷ ಮೂಡಿಸಿದೆ ಎಂದರು.

  ರೈತರಿಗೆ ನೀಡುವ ಬೆಳೆ ಸಾಲವನ್ನು ಶೇ.15ರಷ್ಟು ಬೆಳೆ ಸಾಲದಲ್ಲಿ ಹೆಚ್ಚಿಗೆ ಸಾಲವನ್ನು ಕೊಡಬೇಕು ಎಂದು ಸರಕಾರ ಮಟ್ಟದಲ್ಲಿ ತೀರ್ಮಾಣಿಸಲಾಗಿದ್ದು ಅದನ್ನು ಈಗ ರೈತರಿಗೆ ಸಕಾಲದಲ್ಲಿ ಕೊಟ್ಟರೆ ರೈತರು ಗೊಬ್ಬರ ಸೇರಿದಂತೆ ಕೃಷಿ ಕೆಲಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳಲು ಅನುಕೂಲವಾಗುವುದು. ಆದಷ್ಟು ಬೇಗನೆ ಇದನ್ನು ರೈತರಿಗೆ ಸಕಾಲದಲ್ಲಿ ಸಿಗುವಂತೆ ಆಗಬೇಕು ಎಂದು ಮಲ್ಲಿನಾಥ ಬೋಳಗೊಂಡ ತಿಳಿಸಿದ್ದಾರೆ.

 ಕೊರೊನಾ ಎಚ್ಚರಿಕೆ ಕುರಿತು ಸಲಹೆ : ಕೊರೊನಾ ದಿನೇ ದಿನೇ ಹೆಚ್ಚುತ್ತಲಿದೆ. ಅದು ಯಾರನ್ನು ಲೆಕ್ಕಿಸದೇ ಯಾರು ಬೇಕಾದವರಿಗೂ ಬರಬಹುದು. ಅದಕ್ಕಾಗಿ ಎಲ್ಲರೂ ಅದರ ಬಗ್ಗೆ ಸದಾ ಎಚ್ಚರಿಕೆಯನ್ನು ವಹಿಸಿಬೇಕು. ಇದಕ್ಕೆ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಆದರೆ ಇದರ ಬಗ್ಗೆ ಎಚ್ಚರಿಕೆ ಇರಬೇಕು. ಎಲ್ಲರೂ ಸದಾ ಮಾಸ್ಕ್‍ನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದಿನ ನಿತ್ಯದ ಜೀವನವನ್ನು ಸಾಗಿಸಬೇಕಾಗಿದೆ. ಈಗಾಗಲೇ ಸಂತೆಯಲ್ಲಿ, ಅಂಗಡಿಗಳಲ್ಲಿ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೋಳ್ಳುವುದು ಕಾಣುತ್ತಿಲ್ಲ ಆದ್ದರಿಂದ ಎಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಬೇಕು. ಈಗಾಗಲೇ ಪಟ್ಟಣದ ಸಮೀಪದ ಕೆಲವು ಗ್ರಾಮಗಳಲ್ಲಿ ಬಂದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈಗೆಲೇ ಎಲ್ಲರೂ ಎಚ್ಚರವಹಿಸಿ ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ನಾವೇ ಕಾಪಾಡಬೇಕಾಗಿದೆ. ಪಟ್ಟಣದಲ್ಲಿ 23 ವಾರ್ಡಗಳ ಪುರಸಭೆ ಸದಸ್ಯರು ತಮ್ಮ ತಮ್ಮ ವಾರ್ಡಗಳಲ್ಲಿ ಜನರಿಗೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವುದು ಸೇರಿದಂತೆ ಸರಕಾರದ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕಿದೆ ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳ ಜೊತೆಯು ಸಹ ಚರ್ಚಿಸಲಾಗಿದೆ ಎಂದು ಪ್ರವೀಣ ನಾಡಗೌಡ ತಿಳಿಸಿದ್ದಾರೆ. 

- ನಿಮ್ಮ ಜಾಹೀರಾತುಗಳಿಗಾಗಿ 
   ಸಂಪರ್ಕಿಸಿ +91 9902523698