ಎಗ್ಗಿಲ್ಲದೆ ಸಾಗುತ್ತಿದೆ ಕದ್ದು ಮುಚ್ಚಿ ಮದ್ಯ ಮಾರಾಟ
ರಬಕವಿ-ಬನಹಟ್ಟಿ,ಜು12: ಕೊರೊನಾ ವೈರಸ್ ಸೋಂಕು ಹರಡುವದನ್ನು ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ನಿಯಮವನ್ನು ರಾಜ್ಯ ವ್ಯಾಪಿ ಮುಂದುವರೆಸಿದ್ದರ ಹಿನ್ನಲೆ ರಬಕವಿ-ಬನಹಟ್ಟಿ ವ್ಯಾಪ್ತಿಯಲ್ಲಿ ತಾಲೂಕಾಡಳಿತ ಸಂಜೆ 6 ಗಂಟೆಯಿಂದ ಮುಂದುವರೆಸಿದೆ. ಇದನ್ನೇ ಕೆಲ ಅಕ್ರಮ ಮದ್ಯ ಮಾರಾಟಗಾರರು ಪ್ರಯೋಜನ ಪಡೆದು ಅಲ್ಲಲ್ಲಿ ಸದ್ದಿಲ್ಲದೆ ಅಕ್ರಮವಾಗಿ ಮನೆಯಲ್ಲಿಯೇ ಮದ್ಯ ಮಾರಾಟವಾಗುತ್ತಿರುವ ವರದಿಗಳು ನಡೆಯುತ್ತಿವೆ.
ಸಮಯಕ್ಕೆ ಸರಿಯಾಗಿ ಬಾರ್ ಮತ್ತು ರೆಸ್ಟೋರೆಂಟ್‍ಗಳು ಬಂದ್ ಆದ ನಂತರ ಇವರ ಕಾರ್ಯ ಪ್ರಾರಂಭವಾಗುತ್ತದೆ. ರಾತ್ರಿಯವರೆಗೆ ಲಾಕ್ ಡೌನ್ ಸಂದರ್ಭದಲ್ಲಿಯೂ ಕಾನೂನು ಮೀರಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ.
ನಗರದ ವೈಭವ ಚಿತ್ರ ಮಂದಿರ ಬಳಿ ಹಾಗು ಪಟ್ಟಣದ ಮಧ್ಯ ಭಾಗ ಮೊಳೇಗಾಂವಿ ಗಲ್ಲಿಯೂ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದರೂ ಈ ಬಗ್ಗೆ ಅಬಕಾರಿ ಇಲಾಖೆಯು ಕಣ್ಮುಚ್ಚಿ ಕುಳಿತಿರುವದು ವಿಪರ್ಯಾಸದ ಸಂಗತಿ.

Social Plugin