ರಬಕವಿಯ ಹಳಿಂಗಳಿ ನಾಕಾ ಹತ್ತಿರ ಡಬ್ಬಾ ಅಂಗಡಿಗಳನ್ನು ಪೊಲೀಸ್ ಬಂದೋಬಸ್ತನಲ್ಲಿ  ತೆರವುಗೊಳಿಸುತ್ತಿರುವ ನಗರಸಭೆ ಅಧಿಕಾರಿಗಳು.
ವಿರೋಧದ ಮಧ್ಯೆಯೂ ಒತ್ತುವರಿ ತೆರವು
ರಬಕವಿ-ಬನಹಟ್ಟಿ,ಜು12: ಸ್ಥಳೀಯರ ವಿರೋಧದ ನಡುವೆಯೂ ನಗರಸಭೆಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಪಡೆದು ರವಿವಾರ ಬೆಳ್ಳಂಬೆಳಗ್ಗೆ ರಸ್ತೆ ಬದಿ ಡಬ್ಬಾ ಅಂಗಡಿ ತೆರವು ಕಾರ್ಯಾಚರಣೆ ನಡೆಸಿದರು.
ರಬಕವಿಯ ಹಳಿಂಗಳಿ ನಾಕಾ ಹತ್ತಿರ ಬಸ್ ತಂಗುದಾಣ ನಿರ್ಮಿಸುವ ನಿಟ್ಟಿನಲ್ಲಿ ವೃತ್ತದಲ್ಲಿರುವ ಎರಡು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಸ್ಥಳೀಯರು ಸ್ವಯಂ ಪ್ರೇರಿತವಾಗಿ ತೆರವಿಗೆ ವಿರೋಧ ವ್ಯಕ್ತಪಡಿಸಿ, ಬಡಕುಟುಂಬಗಳಿಗೆ ಮೊದಲೇ ಕೊರೊನಾ ಪ್ರಭಾವದಿಂದ ಹೊಟ್ಟೆ ತುಂಬುತ್ತಿಲ್ಲ. ಇಂತಹ ಕಾರ್ಯದಿಂದ ಬೀದಿಗೆ ಬೀಳುತ್ತಾರೆಂದು ವಿರೋಧಿಸಿದರು.
ರಾಜಕೀಯ ವೈಷಮ್ಯ ಆರೋಪ: ತೇರದಾಳ ಕ್ಷೇತ್ರದ ಬಿಜೆಪಿ ಮುಖಂಡನೋರ್ವ ರಾಜಕೀಯ ವೈಷಮ್ಯದಿಂದ ಅಮಾಯಕ ಬಡಕುಟುಂಬಗಳ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಡಾ. ಪದ್ಮಜೀತ ನಾಡಗೌಡ ಪಾಟೀಲ, ಶಂಕರ ಸೊರಗಾಂವಿ, ನೀಲಕಂಠ ಮುತ್ತೂರ, ಬಸವರಾಜ ಕೊಕಟನೂರ ಆಪಾದಿಸಿದರು.

- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698