ಬನಹಟ್ಟಿಯ ಸದಾಶಿವ ನಗರದ ಸರ್ಕಾರಿ ಶಾಲೆಯಲ್ಲಿನ ಶೌಚಾಲಯದ ಗತಿ.
ಶೌಚಾಲಯವಿಲ್ಲದೆ ಶಿಕ್ಷಕರ ಪರದಾಟ
ರಬಕವಿ-ಬನಹಟ್ಟಿ,ಜು4: ಸ್ಥಳೀಯ ಸದಾಶಿವ ನಗರದ ಸರ್ಕಾರಿ ಶಾಲೆಯಲ್ಲಿ ನಿತ್ಯ ಆಗಮಿಸುವ ಶಿಕ್ಷಕರಿಗೆ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಶೌಚಾಲಯವಿದ್ದರೂ ತೀವ್ರ ಕಲ್ಮಶದಿಂದ ಕೂಡಿದ್ದು ಸದ್ಯ ಮುಖ್ಯಾಧ್ಯಾಪಕ ಕೀಲಿ ಜಡಿದಿರುವದರಿಂದ ಮತ್ತಷ್ಟು ಸಮಸ್ಯೆ ಎದುರಾಗಲು ಕಾರಣವಾಗಿದೆ.
ಅನುದಾನ ದುರ್ಬಳಕೆ ಆರೋಪ: ಶಾಲಾ ಮುಖ್ಯಾಧ್ಯಾಪಕರು ಶಿಕ್ಷಣ ಇಲಾಖೆಯಿಂದ ಬರುವ ಹಣವನ್ನು ವಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡ ಕಾರಣ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಈ ಕುರಿತು ಈ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಕೀತು ಮಾಡಿದಾಗ್ಯೂ ನಿರ್ಲಕ್ಷ್ಯ ಮುಂದುವರೆದಿದೆ.
ಶಿಕ್ಷಕರಲ್ಲಿ ತಾರತಮ್ಯ: ಮನಬಂದಂತೆ ವರ್ತಿಸುತ್ತಿರುವ ಮುಖ್ಯಾಧ್ಯಾಪಕ ಶಿಕ್ಷಕರಲ್ಲಿ ತಾರತಮ್ಯವೆಸಗುತ್ತ ಕಿರುಕುಳ ನೀಡುತ್ತಿದ್ದಾರೆಂದು ಅಲ್ಲಿನ ಶಿಕ್ಷಕರು ತಮ್ಮ ಅಂಬೋಣ ತೋಡಿಕೊಂಡಿದ್ದಾರೆ.

- ನಿಮ್ಮ ಜಾಹೀರಾತುಗಳಿಗಾಗಿ 
ಸಂಪರ್ಕಿಸಿ +91 9902523698