ತೇರದಾಳದಲ್ಲಿ ಸ್ವಯಂ ಘೋಷಿತ ಲಕ್‍ಡೌನ್ ಎಲ್ಲ ವ್ಯಾಪಾರಸ್ಥರು ಪಾಲಿಸಿ.....
ತೇರದಾಳ : ಬಾಗಲಕೋಟ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಪಟ್ಟಣದ ಪ್ರಮುಖರು ಹಾಗೂ ವ್ಯಾಪಾರಸ್ಥರು ಸೇರಿ ತಗೆದುಕೊಂಡ ನಿರ್ಣಯಕ್ಕೆ ಎಲ್ಲ ವ್ಯಾಪಾರಸ್ಥರು ಬದ್ಧರಾಗಬೇಕು ಎಂದು ಪಟ್ಟಣದ ಪ್ರಮುಖರಾದ ಪ್ರವೀಣ ನಾಡಗೌಡ ಹಾಗೂ ರಾಮಣ್ಣ ಹಿಡಕಲ್ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರಮುಖರು ಹಾಗೂ ವ್ಯಾಪಾರಸ್ಥರ ಮುಖ್ಯಸ್ಥರು ನಿರ್ಣಯ ತಗೆದುಕೊಂಡ ನಂತರ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಆಗಿ ಬಂದ್ ಮಾಡಿ ಬೆಂಬಲ ಸೂಚಿಸಿದ್ದೀರಿ. ಆದರೆ ಕೆಲವೊಂದು ಅಲ್ಲಲ್ಲಿ ಕಿರಾಣಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಈ ರೀತಿ ಮಾಡುವುದರಿಂದ ಪಟ್ಟಣದಲ್ಲಿ ಒಗ್ಗಟ್ಟು ಕಂಡು ಬರುವುದಿಲ್ಲ ಹಾಗೂ ಕೊರೊನಾಗೆ ನಾವು ಆಹ್ವಾನ ಮಾಡಿದಂತಾಗುತ್ತದೆ. ಸಾರ್ವಜನಿಕರಾಗಲಿ ವ್ಯಾಪಾರಸ್ಥರಾಗಲಿ ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಸರಕಾರ ಹಾಗೂ ಊರ ಗಣ್ಯರು ತೆಗೆದುಕೊಂಡ ನಿರ್ಣಯಗಳಿಗೆ ಸ್ಪಂಧಿಸಿ ನಿಮ್ಮ ಜೀವಗಳನ್ನು ರಕ್ಷಿಸಿಕೊಳ್ಳುವುದಲ್ಲದೆ ಊರ ಜನರ ಜೀವಗಳನ್ನು ಉಳಿಸಿಕೊಳ್ಳಬೇಕು. ಈ ಕೊರೊನಾ ವೈರಾಣು ಪಟ್ಟಣದಲ್ಲಿ ಹರಡುವುದನ್ನು ತಪ್ಪಿಸಲು ಎಲ್ಲ ಮನೆಯಲ್ಲಿಯೇ ಇರಬೇಕು. ಜೀವ ಉಳಿದರೆ ತಾನೇ ವ್ಯಾಪಾರ, ಸಂಸಾರ ಸೇರಿದಂತೆ ಮನುಷ್ಯನ ಬದುಕು ನಡೆಸಬಹುದು. ಈ ಬದುಕಿಗಾಗಿ ನಾವೆಲ್ಲರೂ ಅರ್ಥ ಮಾಡಿಕೊಂಡು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಮ್ಮ ಸುತ್ತಮುತ್ತ ಅತೀ ಜವಾಬ್ದಾರಿಯುತವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಿದರೆ ಎಲ್ಲರೂ ಬಾಳಿ ಬದುಕುಬಹುದು. ನಿಮ್ಮ ಜೀವ ನಿಮ್ಮ ಕೈಯಲ್ಲಿ. ಮನೆಯಲ್ಲಿಯೇ ಇರಿ, ಕೊರೊನಾದಿಂದ ರಕ್ಷಣೆ ಪಡೆಯಿರಿ. ಇದು ಸ್ವರೂಪ ಸಂದರ್ಶನದ ಕಳಕಳಿ.
ಪ್ರೀಯ ವೀಕ್ಷಕರೇ ಸ್ವರೂಪ ಸಂದರ್ಶನ ಕನ್ನಡ ಯೂಟ್ಯೂಬ್ ವಾಹಿನಿಗೆ ಸ್ಪಂಧಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಈ ಚಾನಲ್‍ನ್ನು ಸಬ್‍ಸ್ಕ್ರೈಬ್ ಮಾಡಿ.. ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...
Social Plugin