ತೇರದಾಳ : ಇಲ್ಲಿಯವರೆಗೆ ನೆಮ್ಮದಿಯಿಂದ ನಾವುಗಳು ಈಗ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.ಏಕೆಂದರೆ ಇವರೆಗೂ ನಮ್ಮ ಪಟ್ಟಣದಲ್ಲಿ ಕೊರೋನಾ ಸೋಂಕು ಕಂಡುಬಂದಿರಲಿಲ್ಲ. ಆದರೆ ಕಳೆದ ಕೆಲವೇ ಕೆಲವು ದಿನಗಳಲ್ಲಿ ಕೊರೋನಾ ವೈರಸ್‍ವು ನಿಧಾನವಾಗಿ ನಮ್ಮ ಪಟ್ಟಣದಲ್ಲಿ ತನ್ನ ಬಾಹುವನ್ನು ಚಾಚಲು ಪ್ರಾರಂಭಮಾಡಿದೆ .ಹೀಗಾಗಿ ಇನ್ನುಮುಂದೆ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪಟ್ಟಣದ ಯುವ ಧುರಿಣ ಪ್ರವೀಣ ನಾಡಗೌಡ ಹೇಳಿದರು. ಈ ಕುರಿತು ಮುಂಜಾಗೃತೆಗಾಗಿ ಸೂಕ್ತ ನಿರ್ಧಾರ ತಗೆದುಕೊಳ್ಳುವ ಉದ್ದೇಶದಿಂದ ಪಟ್ಟಣದಲ್ಲಿರುವ ಪ್ರಮುಖ ಮುಖಂಡರ ಹಾಗೂ ಕಿರಾಣಿ,ತರಕಾರಿ ಇನ್ನಿತರ ಎಲ್ಲ ವ್ಯಾಪಾರಸ್ಥರ ಸಭೆಕರೆದು ಸೂಕ್ತ ಸಲಹೆ ಸೂಚನೆಗಳ ಕುರಿತು ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವ್ಯಾಪಾರಸ್ಥ ಯು.ಜಿ.ಮುಜಾವರ ಅವರು ಪಟ್ಟಣದ ಹಿರಿಯರು ತಗೆದುಕೊಂಡ ನಿರ್ಧಾರ ಸೂಕ್ತವಾಗಿದ್ದು.ಈ ಮುಂಚೆಯೇ ನಾವು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ವಿಳಂಬವಾದರೂ ಪರವಾಗಿಲ್ಲ, ಈಗಲಾದರೂ ನಾವು ಇದನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು.ನಂತರ ಮಾತನಾಡಿದ ಮಹಾದೇವ ಮಾಳಿ ವ್ಯಾಪಾರದ ಸಮಯನ್ನು ಮುಂಜಾನೆ 7ರಿಂದ ಮದ್ಯಾಹ್ನ 2ರ ವರೆಗೆ ನಿಗದಿ ಮಾಡಲು ಸಲಹೆ ನೀಡಿದರು.ನಂತರ ಮಾತನಾಡಿದ ಪುರಸಭೆಯ ಸದಸ್ಯ ವಿನಾಯಕ ಬಂಕಾಪೂರ ಅವರು ನಾಳೆ ಬರುವ ಸೋಮವಾರದಿಂದಲೇ ಮುಂದಿನ ಸೋಮವಾರದ ವರೆಗೆ ಸಂಪೂರ್ಣ ಲಾಕಮಾಡಿದರೆ ಒಳ್ಳೆಯದು.ಈಗ ನಮ್ಮ ಬದುಕು ಅವಶ್ಯಕವಾಗಿದೆ.ಮೋದಲು ಬದುಕನ್ನು ಊಳಿಸಿಕೊಳ್ಳೋಣ. ಕಾರಣ ಕಟ್ಟುನಿಟ್ಟಾಗಿ ಮುಂದಿನ ಒಂದು ವಾರದವರೆಗೆ ಲಾಕಡೌಣ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದರಲ್ಲದೆ ಕೆಲವೊಂದು ವ್ಯಾಪಾರಸ್ತರು ಲಾಕಡೌನ ಮಾಡಿದ್ದರೂ ಸಹ ಅನ್ಯಮಾರ್ಗದಿಂದ ವ್ಯಾಪಾರಮಾಡುತ್ತಿದ್ದರು.ಈ ಬೆಳವಣಿಗೆ ಸರಿ ಅಲ್ಲ ಇನ್ನುಮುಂದೆ ವ್ಯಾಪಾರಸ್ಥರು ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸುರೇಶ ಕಬಾಡಗಿ ಮಾತನಾಡಿ ಸಾರ್ವಜನಿಕರು ಕೊರೊನಾ ವೈರಸ್ ಸೋಂಕಿತರನ್ನು ಬೇರೆ
ದೃಷ್ಟಿಯಿಂದ ನೋಡದೆ ಅವರನ್ನು ಸಹ ಗೌರವದಿಂದ ಕಾಣಬೇಕು. ಈ ಬಗ್ಗೇ ಯಾರು ಅವರ ಗೌರವಕ್ಕೆ ಧಕ್ಕೆಬರುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ನಂತರ ಮಾತನಾಡಿದ ದಯಾನಂದ ಕಾಳೆ ನಾವು ಜೀವಂತವಿದ್ದರೆ ಎಂತಹ ಬೇಕಾದಂತಹ ಸಂತೆ ಮಾಡಬಹುದು.ಆದರೇ ಜೀವವೇ ಹೋದಮೇಲೆ ಏನು ಮಾಡಲು ಸಾದ್ಯವಿಲ್ಲ ಕಾರಣ ನಮ್ಮ ಸಣ್ಣ ತಪ್ಪವು ಸಹ ನಮ್ಮ ಜೀವಕ್ಕೇ ಅಪಾಯ ತರಬಹುದು ಆದ್ದರಿಂದ ನಾವು ನಮ್ಮ ಪಟ್ಟಣದ ರಕ್ಷಣೆಗೋಸ್ಕರ ಲಾಕ್‍ಡೌಣ ತಿರ್ಮಾಣ ತಗೆದುಕೊಳ್ಳುವುದು ಸೂಕ್ತ ಎಂದು ಹೇಳಿದರು. ರಾಮಣ್ಣ ಹಿಡಕಲ್ ಮಾತನಾಡಿ ಪಟ್ಟಣದಲ್ಲಿ ಹಲವಾರು ಜನ ಬೇರೆ ಪ್ರದೇಶದಿಂದ ನಿರಂತರವಾಗಿ ಬರುತ್ತಲಿದ್ದಾರೆ. ಬರಲಿ, ಆದರೆ ಬಂದ ತಕ್ಷಣ ಸರಕಾರದ ನೀತಿ ನಿಯಮಗಳನ್ನು ಪಾಲಿಸಬೇಕು ಅದು ಬಿಟ್ಟು ಮನೆಯಲ್ಲಿ ಅವಿತು
ಕುಳಿತರೇ ಅದು ನಿಮಗೂ ಸರಿ ಅಲ್ಲ ನಮ್ಮ ಪಟ್ಟಣಕ್ಕೂ ಸರಿ ಅಲ್ಲ ಕಾರಣ ದಯವಿಟ್ಟು ಯಾರು ಈ ರೀತಿ ನಡೆದುಕೊಳ್ಳಬಾರದು ಎಂದು ಹೇಳಿದರಲ್ಲದೆ ಸಾಕಷ್ಟು
ಜನ ತಂಬಾಕು ಗುಟಕಾ ತಿಂದು ಎಲ್ಲಿ ಬೇಕಾದಲ್ಲಿ ಉಗುಳುತ್ತಾರೆ ಇದು ಸರಿಯಲ್ಲ ಕೊರೊನಾ ವೈರಸ್ ನಿಗ್ರಹದಲ್ಲಿ ಇಲಾಖೆಗಿಂತ ನಮ್ಮೆಲ್ಲರ ಜವಾಬ್ದಾರಿ ತುಂಬಾ ಇದೆ ಅದರಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಎಲ್ಲ ಪ್ರಮುಖರ ಹಾಗೂ ವ್ಯಾಪಾರಸ್ಥರ ಸಲಹೆ ಸೂಚನೆ ಮೆರೆಗೆ ಪಟ್ಟಣವನ್ನು ಸುಮಾರು ಒಂದು ವಾರದವರೆಗೆ ಲಾಕ್‍ಡೌಣ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.ಆಸ್ಪತ್ರೆ,ಅಂಬ್ಯೂಲೆನ್ಸ,ಹಾಲು,ಔಷಧ ಅಂಗಡಿಗಳನ್ನು ಹೊರತುಪಡಿಸಿ ಬುಧವಾರ ದಿನಾಂಕ 23-07-2020 ರಂದು ಸಾಯಂಕಾಲ 6ರಿಂದ ಮುಂದಿನ ಗುರುವಾರ ದಿನಾಂಕ 30-07-2020 ರವರೆಗೆ ಸಂಪೂರ್ಣವಾಗಿ ಸ್ವಯಂ ಘೋಷಿತ ಲಾಕಡೌನ ಮಾಡಿಕೊಳ್ಳಲು ತಿರ್ಮಾಣಿಸಲಾಯಿತು. ಸಾರ್ವಜನಿಕರು ನಾಳೆ ಬರುವ ಬುಧವಾರದೊಳಗಾಗಿ ತಮ್ಮೆಲ್ಲ ಸಂತೆ ವ್ಯವಹಾರವನ್ನು ಮುಗಿಸಿಕೊಳ್ಳಬೇಕೆಂದು ಈ
ಮೂಲಕ ಪಟ್ಟಣದ ಪ್ರಮುಖರು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಅಲ್ಲದೇ
ತರಕಾರಿ ಮಾರುವವರು ಪಟ್ಟಣದಲ್ಲೆಲ್ಲಾ ಸಂಚರಿಸಿ ತರಕಾರಿ ಮಾರಾಟ ಮಾಡಬಹುದು.ಆದರೆ ಕಡ್ಡಾಯವಾಗಿ ಮಾಸ್ಕ ಹಾಗೂ üಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಲ್ಲದೇ ಒಂದೇಕಡೆಗೆ ಜನ ಸೇರದಂತೆ ಜಾಗ್ರತೆವಹಿಸಬೇಕು ಎಂದು ತಿಳಿಸಿದ್ದಾರೆ.ಈ ಲಾಕಡೌಣ ಸಂದರ್ಭದಲ್ಲಿ ಹಿರಿಯರು ತಿರ್ಮಾಣಿಸಿದ ನಿರ್ಣಯಕ್ಕೆ ಯಾರಾದರೂ ತದ್ವಿರುದ್ಧವಾಗಿ ನಡೆದುಕೊಂಡಲ್ಲಿ ಅಂತವರಿಗೆ ದಂಡವಿದಿಸಿವುದು ಎಂದು ತಿಳಿಸಿದರು. ಈಗ ಹಬ್ಬದ ಸಮಯವಿರುವುದರಿಂದ ವ್ಯಾಪಾರಸ್ಥರೆಲ್ಲರು ಬುಧುವಾರದವರೆಗೆ ತಮ್ಮ ವ್ಯಾಪಾರ ವಹಿವಾಟವನ್ನು ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕರಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹನಮಂತ ರೋಡನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣದ ಪ್ರಮುಖರು ಹಾಗೂ ಪುರಸಭೆ ಸದಸ್ಯರು ಮತ್ತು ದಿನಸಿ ಅಂಗಡಿಗಳ ಮಾಲಕರು, ತರಕಾರಿ ವ್ಯಾಪಾರಸ್ಥರು ಇದ್ದರು. ಎಫ್.ಬಿ.ಗಿಡ್ಡಿ ಸ್ವಾಗತಿಸಿ ವಂದಿಸಿದರು.
Social Plugin