ಇಂದು ಎರಡು ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆ

ತೇರದಾಳ : ಪಟ್ಟಣದಲ್ಲಿ ಮಹಾಮಾರಿ ಕೊರೊನಾ ವೈರಾನುವಿನ ಅಬ್ಬರ ಹೆಚ್ಚಾಗುತ್ತಿದ್ದು ಇಂದು ಸೋಂಕು ತಗುಲಿರುವ ಎರಡು ಪ್ರಕರಣಗಳು ಪತ್ತೆಯಾಗಿದ್ದು ಇದರಿಂದ ಪಟ್ಟಣದ ಜನರಲ್ಲಿ ಆತಂಕವನ್ನು ಮೂಡಿಸಿದೆ.

  ಸಿದ್ದೇಶ್ವರ ಗಲ್ಲಿಯ 67 ವರ್ಷದ ಓರ್ವ ಪುರುಷ ಹಾಗೂ ದೇವರಾಜ ನಗರದ 22ವರ್ಷದ ಓರ್ವ ಮಹಿಳೆಗೆ ಕೊರೊನಾ ನಂಜು ಧೃಡಪಟ್ಟಿದೆ. ಓರ್ವ ಪುರುಷ ಈಗಾಗಲೇ ಬಿಜಾಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 22ವರ್ಷದ ಮಹಿಳೆ ಸೇರಿದಂತೆ ತೇರದಾಳ ಪಟ್ಟಣದಲ್ಲಿ ಈಗ ಮೂವರು ಪುರುಷರಿಗೆ ಹಾಗೂ 22ವರ್ಷದ ಓರ್ವ ಮಹಿಳೆಗೆ ಕೊರೊನಾ ಧೃಡಪಟ್ಟಂತಾಗಿದೆ. ಇಂದು ಎರಡನೇ ಸೋಂಕಿತನಿಗೆ ಸಂಭಂದಪಟ್ಟಂತೆ 9ಜನರನ್ನು ಇಂದು ರಬಕವಿಯ ಓಬಿಸಿ ಹಾಸ್ಟೇಲ್‍ದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.


👉 ಶೀಘ್ರ ಸುದ್ದಿಗಳಿಗಾಗಿ "ಸ್ವರೂಪ ಸಂದರ್ಶನ"  ಫೇಸ್ಬುಕ್ ಪೇಜ್ ಹಾಗೂ ಯೂಟ್ಯೂಬ್  ಚಾನಲ್ ತಪ್ಪದೇ ಸಬ್ಸ್ಕ್ರೈಬ್ ಮಾಡಿ.....