ಡಿಕೆಶಿ ಪಟ್ಟಾಭಿಷೇಕದಿಂದ ಕಾಂಗ್ರೆಸ್‍ಗೆ ಹೊಸ ಚೈತನ್ಯ
ರಬಕವಿ-ಬನಹಟ್ಟಿ,ಜು3: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಪದಗ್ರಹಣವು ರಾಜ್ಯದಲ್ಲಿ ಹೊಸ ಸಂದೇಶ ಸೃಷ್ಟಿಸುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಾಢ್ಯಗೊಳ್ಳುವಲ್ಲಿ ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಗುಡ್ಡೋಡಗಿ ತಿಳಿಸಿದರು.
ರಬಕವಿಯ ಶಿವಶಿಂಪಿ ಸಮುದಾಯ ಭವನದಲ್ಲಿ ನಡೆದ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಪದಗ್ರಹಣ ನಂತರ ಮಾತನಾಡಿ, ಡಿಜಿಟಲ್ ತಂತ್ರಜ್ಞಾನ ಮೂಲಕ ವೀಕ್ಷಣೆ ಮಾಡುವ ಮೂಲಕ ಯುವಕರಲ್ಲಿ ಹುಮ್ಮಸ್ಸು ಮೂಡಿಸುವ ಮೂಲಕ ಪಕ್ಷದ ಹಿರಿಯರಿಗೂ ವಿನೂತನವಾದ ಕಾರ್ಯಕ್ರಮವಾಗುವಲ್ಲಿ ಯಶಸ್ವಿ ಕಂಡಿದ್ದಲ್ಲದೆ ಹೊಸ ಅನುಭವ ನೀಡುವಲ್ಲಿ ಕಾರಣವಾಗಿದೆ ಎಂದರು.
ಇದೇ ಸಂದರ್ಭ ಸಂಗಪ್ಪ ಕುಂದಗೋಳ, ಅರವಿಂದ ಮನ್ನಿಕೇರಿ, ಚಂದ್ರು ಹರಿಜನ, ಅಸ್ಲಾಂ ಶಿಲ್ಲೇದಾರ, ಉಸ್ಮಾನಸಾಬ್ ಲೆಂಗ್ರೆ, ಬಸವರಾಜ ಮುರಗುಂಡಿ, ಮಹಾದೇವ ತುರಾದಿ, ಸಂಗಪ್ಪ ಮಡಿವಾಳ, ಶ್ರೀಕರ ಪಿಸೆ, ಪಿಂಟು ಕುಂಬಾರ, ಸಂಗಪ್ಪ ಕಂಬಾರ ಸೇರಿದಂತೆ ಅನೇಕರಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698