ಸಾಗರೋತ್ತರ ಕನ್ನಡಿಗರಿಂದ ನಡೆದ ಸಂವಾದದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ.....
ಸಾಗರೋತ್ತರ ಕನ್ನಡಿಗರಿಂದ ಗಮನಸೆಳದ ಸಂವಾದ.
ರಬಕವಿ-ಬನಹಟ್ಟಿ,ಜು3: ಕೊರೊನಾ ಸಂಕಷ್ಟದ ಹಿನ್ನಲೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವರು ಸಾಗರೋತ್ತರ ಕನ್ನಡಿಗರೊಂದಿಗೆ ಗುರುವಾರ ಸಂವಾದ ಕಾರ್ಯಕ್ರಮದಲ್ಲಿ ಕಷ್ಟ ಸುಖಗಳನ್ನು ಕೇಳಿ ಕುಶಲೋಪರಿ ನಡೆಸಿದರು.
ಈ ವೇಳೆ ಯುಕೆದಿಂದ ಮಾತನಾಡಿದ ಚಂದ್ರಶೇಖರ ಲಿಂಗದಳ್ಳಿ ನಾವೆಲ್ಲರೂ ಎಲ್ಲೆ ಇದ್ದರೂ ಬಸವ ಭಕ್ತರಾಗಿದ್ದೇವೆ, ಕೊರೊನಾ ಸಂಕಟದಲ್ಲಿ ಬಸವ ತತ್ವದ ಪ್ರಸಕ್ತತೆ ಹೆಚ್ಚು ಮಹತ್ವವಿದೆ. ಕಾಯಕ ಮತ್ತು ದಾಸೋಹ ನಮಗೆ ಈ ಸಂಕಟದ ಸಮಯದಲ್ಲಿ ಹೆಚ್ಚು ನೆರವಿಗೆ ಬರಲಿದೆ ಎಂದರು.
ಶಂಕರ ಬಿದರಿಯವರು ನಾಡಿಗೆ ಪೊಲೀಸ್ ಇಲಾಖೆ ಮೂಲಕ ದಕ್ಷ ಆಡಳಿತ ನಡೆಸಿ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿ ಬಸವಣ್ಣನವರ ಅನುಯಾಯಿಗಳಾಗಿದ್ದು, ನಮ್ಮ ಜೊತೆ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿರುವದು ಸಂತಸ ತಂದಿದೆ. ಅವರ ಬಸವ ತತ್ವದಡಿಯ ಕಾಯಕವೇ ಕೈಲಾಸವನ್ನು ಜೀವನದಲ್ಲಿ ರೂಢಿಸಿಕೊಂಡು ಮಾನವೀಯ ಮೌಲ್ಯಗಳಿಂದ ಜನಹಿತಕ್ಕಾಗಿ ಶ್ರಮಿಸುತ್ತಿದ್ದಾರೆಂದು ಗೋಪಾಲ ಕುಲಕರ್ಣಿ ತಿಳಿಸಿದರು.
ಇದೇ ಸಂದರ್ಭ ಮಾತನಾಡಿದ ಬಿದರಿ, ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ ಎಲ್ಲ ಕನ್ನಡಿಗರ ಕುರಿತು ಮಾತನಾಡಿ, ಕೆಲಸ ಹುದ್ದೆ ಯಾವದೇ ಇರಲಿ ಶೃದ್ಧಾಭಕ್ತಿಯಿಂದ ಪ್ರಾಮಾಣಿಕ ಸೇವೆಯಲ್ಲಿ ತೊಡಗಿದಲ್ಲಿ ಅಪ್ರಾಮಾಣಿಕ ಪ್ರಧಾನಿಗಿಂತಲೂ ಶ್ರೇಷ್ಠ ಕಾಯಕವೆಂದರು.
ಒಂದುವರೆ ಗಂಟೆಗಳ ಕಾಲ ನಡೆದ ಸಂವಾದದಲ್ಲಿ ದುಬೈ, ಅಮೇರಿಕಾ, ಇಟಲಿ, ಜರ್ಮನ್, ಶಾರ್ಜಾ ಸೇರಿದಂತೆ ಅನೇಕ ದೇಶಗಳಲ್ಲಿರುವ ಕನ್ನಡಿಗರು ಭಾಗಿಯಾಗಿದ್ದರು.


- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698