ಬನಹಟ್ಟಿಯಲ್ಲಿ ಅರ್ಧ ಲಾಕ್‍ಡೌನ್ ಮಾಡುವ ನಿಟ್ಟಿನಲ್ಲಿ ಜನತೆ ಸ್ವಯಂಪ್ರೇರಿತವಾಗಿ ಸಮ್ಮತಿ ಸೂಚಿಸಿದರು.
ರಬಕವಿ-ಬನಹಟ್ಟಿ ಪಟ್ಟಣ ಅರ್ಧ ಲಾಕ್‍ಡೌನ್‍ಗೆ ಸಮ್ಮತಿ
ಒಂದು ವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಸಂಚಾರ
ರಬಕವಿ-ಬನಹಟ್ಟಿ,ಜು21: ಇಡೀ ತಾಲೂಕಿನಾದ್ಯಂತ ನಗರ ಹಾಗು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಹಿನ್ನಲೆ ರಬಕವಿ-ಬನಹಟ್ಟಿ-ಹೊಸೂರ-ರಾಂಪೂರ ನಗರಾದ್ಯಂತ ಜನತೆ ಸ್ವಯಂಪ್ರೇರಿತವಾಗಿ ಅರ್ಧ ದಿನ ಲಾಕ್‍ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಸೋಮವಾರ ರಾತ್ರಿ ನಗರದ ಬಂಗಾರೆವ್ವ ತಟ್ಟಿಮನಿ ಸಭಾಭವನದಲ್ಲಿ ಕರೆದ ಹಿರಿಯರ ತುರ್ತು ಸಭೆಯಲ್ಲಿ ಪಾಲ್ಗೊಂಡ ಪ್ರಮುಖ ಹಿರಿಯರು ಅರ್ಧ ಲಾಕ್‍ಡೌನ್‍ಗೆ ಸಹಮತ ತೋರಿದ್ದು ಮುಂದಿನ ಒಂದು ವಾರದ ಕಾಲ ಈ ನಿಯಮ ಪಾಲನೆಗೆ ಒಪ್ಪಿದ್ದಾರೆ.
ಈಗಾಗಲೇ ರಬಕವಿ-ಹೊಸೂರ-ರಾಂಪೂರ ಪಟ್ಟಣದಾದ್ಯಂತ ಸ್ವಯಂಪ್ರೇರಿತ ಅರ್ಧ ಲಾಕ್‍ಡೌನ್ ಮಾಡಿಕೊಂಡಿದ್ದಾರೆ. ಎಲ್ಲ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಬೇಕಾಬಿಟ್ಟಿಯಾಗಿ ಸಂಚರಿಸುವಂತಿಲ್ಲ.
ಉಪವಿಭಾಗಾಧಿಕಾರಿ ಆದೇಶ: ಬುಧವಾರದಿಂದಲೇ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ್ದು ಇದ್ದು, ನಂತರ ಸಂಪೂರ್ಣ ಲಾಕ್‍ಡೌನ್ ಮಾಡುವಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಸ್ಪಷ್ಟನೆ ನೀಡಿದ್ದಾರೆಂದು ಸ್ಥಳೀಯ ನಗರಸಭೆ ಅಧಿಕೃತವಾಗಿ ತಿಳಿಸಿದೆ.
ಕೊರೊನಾ ವೈರಸ್‍ನಿಂದಾಗಿ ಈಗಾಗಲೇ ಕೆಲ ರಬಕವಿ-ಬನಹಟ್ಟಿ, ತೇರದಾಳ ಪಟ್ಟಣ ಹಾಗು ಇತರೆ ಗ್ರಾಮಗಳಲ್ಲಿ ತೀವ್ರ ಕಂಟಕವಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಕಟ್ಟಿಹಾಕಲು ಸಕಲ ರೀತಿಯಲ್ಲಿ ತಾಲೂಕಾಡಳಿತ ಸನ್ನದ್ಧವಾಗಿದೆ.
ಇದೇ ಸಂದರ್ಭ ಶ್ರೀಶೈಲ ದಭಾಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಸಿದ್ಧನಗೌಡ ಪಾಟೀಲ, ಡಾ. ಪಿ.ವಿ. ಪಟ್ಟಣ, ಶಂಕರ ಸೊರಗಾಂವಿ, ಶಂಕರ ಜುಂಜಪ್ಪನವರ, ರಾಜು ಅಂಬಲಿ, ರಾಜು ಭದ್ರನ್ನವರ, ಎಂ.ಜಿ. ಕೆರೂರ, ಶಂಕರಯ್ಯ ಕಾಡದೇವರ, ಮಹಾಶಾಂತ ಶೆಟ್ಟಿ, ಶಂಕರ ಜಾಲಿಗಿಡದ, ಓಂಪ್ರಕಾಶ ಕಾಬರಾ, ಸುರೇಶ ಕೋಲಾರ, ಚನ್ನಪ್ಪ ಗುಣಕಿ, ಶಿವು ಬಾಗೇವಾಡಿ ಸೇರಿದಂತೆ ಅನೇಕರಿದ್ದರು.

Social Plugin