ತೇರದಾಳ ಜವಳಿ ಬಜಾರದಲ್ಲಿನ ಸೋಂಕಿತ ವ್ಯಕ್ತಿಯು ಮೃತರಾದ ಹಿನ್ನಲೆಯಲ್ಲಿ ಆ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.

ಸೋಂಕಿತ ವ್ಯಕ್ತಿಯ ವಾಸಿಸುವ ಪ್ರದೇಶ ಸೀಲ್‍ಡೌನ್ ಸಾರ್ವಜನಿಕರಿಂದ ಪ್ರಸಂಶೆ

ತೇರದಾಳ : ಪಟ್ಟಣದ ಜವಳಿ ಬಜಾರಿನಲ್ಲಿದ್ದ ಸೋಂಕಿತ ವ್ಯಕ್ತಿಯು ರವಿವಾರ ಮೃತನಾದ ಹಿನ್ನಲೆಯಲ್ಲಿ ಸೋಮವಾರ ಪುರಸಭೆವತಿಯಿಂದ ಸ್ಯಾನಿಟೈಜರ್ ಮಾಡಿ. ನಂತರ ಸೀಲ್‍ಡೌನ್ ಮಾಡಿದ್ದನ್ನು ಕಂಡು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಸಂಶಿಸಿದ್ದಾರೆ.

  ಪಟ್ಟಣದ ಜವಳಿ ಬಜಾರದಲ್ಲಿನ ಸೋಂಕಿತ ವ್ಯೆಕ್ತಿ ರವಿವಾರ ಬಾಗಲಕೋಟೆಯ ಕೋವಿಡ್ ಆಸ್ಪತ್ರೆಯಲ್ಲಿ ಮೃತರಾದರು. ಸೋಮವಾರ ಸೋಂಕಿತ ವಾಸಿಸುವ ಪ್ರದೇಶವನ್ನು ಪುರಸಭೆಯವರು ಸ್ಯಾನಿಟೈಜರ್ ಮಾಡುವುದರೊಂದಿಗೆ ಆ ಪ್ರದೇಶವನ್ನು ಸ್ವಚ್ಚಗೊಳಿಸಿದರು. ನಂತರ ಪುರಸಭೆ ಹಾಗೂ ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿಯವರು ಸೇರಿ ಬಿದಿರನ್ನು ಕಟ್ಟುವ ಮೂಲಕ ಆ ಪ್ರದೇಶವನ್ನು ಸೀಲ್‍ಡೌನ್ ಮಾಡಿದನ್ನು ಬಜಾರದಲ್ಲಿನ ನಿವಾಸಿಗಳು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.

  ಜನರ ರಕ್ಷಣೆಗಾಗಿ ಹಗಲಿರುಳು ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್‍ಗಳು ಶ್ರಮಪಡುತ್ತಿರುವುದು ಕಣ್ಣಾರೆ ಕಾಣುತ್ತಿರುವ ವಿಷಯ. ಅವರು ತಮ್ಮೆಲ್ಲ ಕುಟುಂಬಗಳನ್ನು ಮರೆತು ಜನರ ಪ್ರಾಣ ರಕ್ಷಣೆಗೆ ಪಣ ತೊಟ್ಟು ನಿಂತಿದ್ದಾರೆ. ಅಧಿಕಾರಿಗಳಾಗಲಿ ಶಾಸಕ ಸಚಿವರಾಗಲಿ ಆದೇಶದಂತೆ ಜನ ಮೆಚ್ಚುವ ಕೆಲಸವನ್ನು ಆರೋಗ್ಯ ಇಲಾಖೆ, ಪೋಲಿಸ್‍ರಾಗಲಿ, ಕಂದಾಯ ಇಲಾಖೆಯವರಾಗಲಿ, ಪುರಸಭೆಯವರಾಗಲಿ ಮನ ಮುಟ್ಟುವಂತೆ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವು ಸ್ವಾರ್ಥಿಗಳು ಅಧಿಕಾರಿಗಳು ಮಾಡುವ ಕೆಲಸದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಸೀಲ್‍ಡೌನ್ ವಿಚಾರದಲ್ಲಿ ಸ್ವಾರ್ಥಿಗಳು ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಾಗ ಅಧಿಕಾರಿಗಳು ಅವರುಗಳ ಮಾತನ್ನು ತಿರಸ್ಕರಿಸಿ ಕಾನೂನಾತ್ಮಕವಾಗಿ ತಮ್ಮ ಕರ್ತವ್ಯವನ್ನು ಚಾಚು ತಪ್ಪದೆ ಮಾಡಿದ್ದರ ಫಲವಾಗಿ ಈ ಕೆಲ ಸ್ವಾರ್ಥಿಗಳು ಅಧಿಕಾರಿಗಳ ಮೇಲೆ ಕೆಲ ಪತ್ರಿಕೆಗಳನ್ನು ಉಪಯೋಗಿಸಿ ಗೂಬೆ ಕೂಡ್ರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಈ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆಯಾದರೂ ಆ ಸ್ವಾರ್ಥಿಗಳ ಸಹವಾಸ ಬಿಟ್ಟು ಸಮಾಜದ ಏಳ್ಗೆಗಾಗಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್‍ಗಳ ಬೆಂಬಲಕ್ಕಾಗಿ ಪತ್ರಿಕಾ ಮಿತ್ರರು ಸ್ವಲ್ಪ ಆತ್ಮಾವಲೋಕನ ಮಾಡಿಕೊಂಡು ಸಮಾಜಕ್ಕೆ ಒಳ್ಳೆಯ ಸತ್ಯ ಸಂದೇಶವನ್ನು ನೀಡಲಿ.