ರಬಕವಿ-ಬನಹಟ್ಟಿ: ಕೊರೊನಾಕ್ಕೆ ಎರಡನೇ ಬಲಿ
ರಬಕವಿ-ಬನಹಟ್ಟಿ,ಜು9: ಹೆಮ್ಮಾರಿ ಕೊರೊನಾಗೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಜು.2 ಕಳೆದ ಗುರುವಾರ ಹಿಪ್ಪರಗಿಯ 94 ವರ್ಷದ ವೃದ್ಧೆ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಕೊರೊನಾಕ್ಕೆ ಬಲಿಯಾದರೆ, ಇಂದು ಜು.9 ಗುರುವಾರ ಬಾಗಲಕೋಟೆ ಕೋವಿಡ್-19 ಆಸ್ಪತ್ರೆಯಲ್ಲಿ ಬನಹಟ್ಟಿಯ 60 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾದ ಎರಡನೇ ವ್ಯಕ್ತಿಯಾಗಿದ್ದಾರೆ.
ಮೃತ 94 ರ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದು ಗೊತ್ತೇಯಾಗದ ಕಾರಣ, ಸ್ವಗ್ರಾಮವಾದ ಹಿಪ್ಪರಗಿಗೆ ತಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇದಕ್ಕೆ ಸಂಬಂಧ 68 ಜನರನ್ನು ಕ್ವಾರಂಟೈನ್ ಮಾಡಲಾಗಿ ಮತ್ತೇ ಮೂವರಿಗೆ ಸೋಂಕು ದೃಡಪಟ್ಟಿದೆ.
ಬನಹಟ್ಟಿಯ ಪಿ-10165ನ 60 ವರ್ಷದ ಪೇಸೆಂಟ್ ಕೊರೊನಾದಿಂದ ಮೃತಪಟ್ಟಿದ್ದು, ಆತನ ಪತ್ನಿ ಮಹಾರಾಷ್ಟ್ರದಿಂದ ಬಂದಿದ್ದರ ಹಿನ್ನಲೆ ಇತರೆ ಅನಾರೋಗ್ಯದ ಕಾರಣ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಇದರಿಂದ ಕುಟುಂಬದ ಎಲ್ಲ 6 ಜನರಿಗೂ ವೈರಸ್ ಒಕ್ಕರಿಸಿದ ಪರಿಣಾಮ ಎಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ಕಳಿಸಲಾಗಿತ್ತು.

Social Plugin