ದುಬೈನ ಭಾರತೀಯ ದೂತವಾಸ ಕಚೇರಿಯಲ್ಲಿ ಬಸವಣ್ಣನ ಮೂರ್ತಿ ಪ್ರತಿಮೆ ಪ್ರತಿಷ್ಠಾಪಿಸಲಾಯಿತು.
ದುಬೈನಲ್ಲಿ ಬಸವಣ್ಣ ಪ್ರತಿಮೆ ಪ್ರತಿಷ್ಠಾಪನೆ
ರಬಕವಿ-ಬನಹಟ್ಟಿ,ಜು8:  ದುಬೈನಲ್ಲಿರುವ ಭಾರತೀಯ ದೂತವಾಸ ಕಚೇರಿಯಲ್ಲಿ ಯುಎಇ ಬಸವ ಸಮಿತಿ ದುಬೈ ವತಿಯಿಂದ ಜಗಜ್ಯೋತಿ ಬಸವಣ್ಣನವರ ಸ್ವರೂಪಿ ಪ್ರತಿಮೆಯನ್ನು ಭಾರತೀಯ ಕೌನ್ಸಲ್ ಜನರಲ್ ವಿಪಲ್ ಶಾಹರಿಂದ ಪ್ರತಿಮೆ ಪ್ರತಿಷ್ಠಾಪಿಸಲಾಯಿತು.
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮ ನಿಯೋಜನೆ ಮಾಡಲಾಗಿ, ಬಸವ ತತ್ವವನ್ನು ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿಯೂ ಪಸರಿಸುವ ಕಾರ್ಯಕ್ಕೆ ಅವರು ಚಾಲನೆ ನೀಡಿದರು.
ದುಬೈ ಬಸವ ಸಮಿತಿ ಅಧ್ಯಕ್ಷ ಸತೀಷ ಹಿಂಡೇರ, ಸ್ಥಾಪಕ ಸಮಿತಿ ಸದಸ್ಯ ಚಂದ್ರಶೇಖರ ಲಿಂಗದಳ್ಳಿ, ಮಲ್ಲಿಕಾರ್ಜುನ ಮುಳ್ಳೂರ, ಡಾ. ಮಮತಾ ರೆಡ್ಡೇರ ಹಾಜರಿದ್ದರು.