ಕೊರೊನಾ ಎನ್ನುವ ಹೆಮ್ಮಾರಿ ಇಡೀ ದೇಶವನ್ನೇ ಕಾಡುತ್ತಿದೆ. ಅದರಲ್ಲೂ ಕರ್ನಾಟಕದ ಚಿತ್ರರಂಗಕ್ಕೆ ಮತ್ತು ಕರ್ನಾಟಕದ ಅನೇಕ ಜನರಿಗೆ ಇದರಿಂದ ಕಷ್ಟ ಆಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರೋದ್ಯಮ ಹಲವರು ಸಂಕಷ್ಟಗಳನ್ನ ಎದುರಿಸ್ತಾಯಿರೋ ಈ ಸಂದರ್ಭದಲ್ಲಿ ರಾಜೇಶ್ ಬ್ರಹ್ಮಾವರ್ ರವರ ಈ ಅಭಿಯಾನಕ್ಕೆ ಸಾರಾಗೋವಿಂದು ರವರ ಮಾತುಗಳಲ್ಲಿ - ನನ್ನ ಅನೇಕ ಜನ ಗೆಳೆಯರು, ಹಿರಿಯರು ಎಲ್ಲರು ಒಂದು ಚಿತ್ರರಂಗದ ಪರವಾಗಿ ಅಭಿಯಾನವನ್ನ ಪ್ರಾರಂಭ ಮಾಡಿದ್ದಾರೆ. ಅದು ಚಿತ್ರರಂಗವನ್ನ ಉಳಿಸಿ ಅನ್ನುವಂತ ಅಭಿಯಾನ. ಅದರಲ್ಲಿ ನಿರ್ಮಾಪಕರು, ನಿರ್ದೇಶಕರು, ಹಂಚಿಕೆದಾರರು, ಪ್ರದರ್ಶಕರು ಮತ್ತು ಚಿತ್ರರಂಗದ ಕಾರ್ಮಿಕರು ಇವರೆಲ್ಲರನ್ನು ಸಂಕಷ್ಟದಿಂದ ಪಾರುಮಾಡಬೇಕೆಂದು ಹೇಳಿ ರಾಜ್ಯದ ಮುಖ್ಯ ಮಂತ್ರಿಗಳಲ್ಲಿ ಮನವಿಯನ್ನು ಕೊಡಬೇಕೆಂದು ಅಭಿಯಾನ ಪ್ರಾರಂಭ ಮಾಡಿರುವುದಕ್ಕೆ ಇಡೀ ಚಿತ್ರೋದ್ಯಮ ಕೈ ಜೋಡಿಸಿದೆ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಚಿತ್ರೋದ್ಯಮಕ್ಕೆ ಒಂದು ವಿಶೇಷವಾದಂತಹ ಪ್ಯಾಕೇಜ್ ನ್ನ ಸರ್ಕಾರ ಕೊಡಬೇಕು ಅಂತ ಹೇಳಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಎಲ್ಲ ರಾಜಕೀಯ ವ್ಯಕ್ತಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಹಾಗೂ ಎಲ್ಲರು ದಯಮಾಡಿ ಸ್ಪಂದಿಸಬೇಕೆಂದು ಕೇಳಿಕೊಂಡಿದ್ದಾರೆ.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ -+91 9902523698

Social Plugin