ತೇರದಾಳ ಪಟ್ಟಣದ ಸ್ವಾಮಿ ವಿವೇಕಾನಂದ ಇಂಟರ್‍ನ್ಯಾಶನಲ್ ಪಬ್ಲಿಕ್ ಶಾಲೆ (ಸಿಬಿಎಸ್‍ಇ)ಯ ಹತ್ತನೆಯ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು.
ಸ್ವಾಮಿ ವಿವೇಕಾನಂದ ಸಿಬಿಎಸ್‍ಇ ಶಾಲೆಯ ಫಲಿತಾಂಶ ಶೇ.100ರಷ್ಟು
ತೇರದಾಳ : ಪಟ್ಟಣದ ಶ್ರೀಸಿದ್ದೇಶ್ವರ ವಿದ್ಯಾವರ್ಧಕ ಸಂಘದ, ಸ್ವಾಮಿ ವಿವೇಕಾನಂದ ಇಂಟರ್‍ನ್ಯಾಶನಲ್ ಪಬ್ಲಿಕ್ ಶಾಲೆ (ಸಿಬಿಎಸ್‍ಇ)ಯ ಹತ್ತನೆಯ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಶೇ.100ರಷ್ಟಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ದೇಸ್ತೋಟ ಹಾಗೂ ಶಾಲೆಯ ಚೇರಮನ್ ಶಂಕರ ಹೊಸಮನಿ ತಿಳಿಸಿದ್ದಾರೆ.
______________________________________
ಜಾಹೀರಾತು 👇
_______________________________________
ಕೀರ್ತಿ.ಶ್ರೀಶೈಲ. ಹೊಸಮನಿ 467(ಶೇ.93.4) ರಷ್ಟು ಅಂಕ ಪಡೆದು ಪ್ರಥಮ, ಸ್ವಾತಿ ದಯಾನಂದ ಮಲಾಬದಿ 457(ಶೇ.91.) ರಷ್ಟು ಅಂಕ ಪಡೆದು ದ್ವಿತೀಯ, ದೀಪಾ. ಮಹಾದೇವ. ಮಾಲಗಾವಿ 455(ಶೇ.91)ರಷ್ಟು ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 53 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಗ್ಸನ್- 17 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 14 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶಾಲೆಯ ಫಲಿತಾಂಶ ಶೇ.100ರಷ್ಟಾಗಿದೆ ಎಂದು ಅವರು ತಿಳಿಸಿದ್ದಾರೆ. ಸಂಘದ ಚೇರಮನ್ ರಮೇಶ ಅವರಾದಿ ಮತ್ತು ಶಾಲಾ ಆಡಳಿತ ಮಂಡಳಿಯವರು ಹಾಗೂ ಶಾಲಾ ಪ್ರಾಚಾರ್ಯರು ಹಾಗೂ ಶಾಲಾ ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Social Plugin