ಮುಂದುವರೆದ ಆಶಾಕಾರ್ಯಕರ್ತೆಯರ ಹೋರಾಟ.
ತೇರದಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ರಾಜ್ಯಾದ್ಯಂತ ಆಶಾಕಾರ್ಯಕರ್ತೆಯರು ಸುಮಾರು ದಿನಗಳಿಂದ ಹೋರಾಟ ಪ್ರಾರಂಭ ಮಾಡಿದ್ದಾರೆ.ಈಗಾಗಲೆ ಸರಕಾರ ಕೊಡುವ ವೇತನವ 4000 ರೂಪಾಯಿಗಳಿಂದ 12000 ರೂಪಾಯಿಗಳಿಗೆ ನಿಗದಿಮಾಡಬೇಕು ಅಲ್ಲದೇ ಅತಂತ್ರ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು.ಕೊರೋನಾಕ್ಕೆ ಸಂಬಂಧಿಸಿದಂತೆ ನಾವೆಲ್ಲ ಮಾಹಿತಿಯನ್ನು ಸಮುದಾಯದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕುತ್ತಿರುವುದರಿಂದ ಸಾಕಷ್ಟು ಅಪಾಯವನ್ನು ಎದುರಿಸುವಂತಹ ಸಂದರ್ಭ ಬರುತ್ತದೆ. ಸುರಕ್ಷತಾ ಕಿಟ್‍ಗಳಲ್ಲಿದೆ
ನಾವು ಹೇಗೆ ಕರ್ತವ್ಯನಿರ್ವಹಿಸಬೇಕು ನೀವೆ ಹೇಳಿ? ಕರೋನಾ ಸೋಂಕಿತ ಇದ್ದಾನೆ ಎಂದರೇ ಸಾಕು ಇಡೀ ಪ್ರದೇಶವನ್ನು ಸೀಲುಮಾಡಿ ಸ್ಯಾನಿಟೈಜರ ಸಿಂಪಡಿಸಿ ಅಲ್ಲಿ ಯಾರು ಬರದಂತೆ ನಿರ್ಭಂಧ ಮಾಡುತ್ತಾರೆ ಇಂತಹ ಭಯಾನಕ ವಾತಾವರಣದಲ್ಲಿ ನಾವು ಹೇಗೆ ಕರ್ತವ್ಯ ನಿರ್ವಹಿಸಬೇಕು ನೀವೇ ತಿಳಿಸಿ. ಹೀಗಾಗಿ ನಮ್ಮ ಸುರಕ್ಷತಾ ಹಿತದೃಷ್ಟಿಯಿಂದ ಸುರಕ್ಷಾ ಕಿಟಗಳನ್ನು ಕೇಳುವುದು ತಪ್ಪೇ? ಕರೋನಾ ವಿಷಯದಲ್ಲಿ ಆಶಾಕಾರ್ಯಕರ್ತೆಯರ ಸೇವೆ ಹೇಗೆ ಎಂಬುದು ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ರಾಜ್ಯದಲ್ಲಿರುವ ಎಲ್ಲ ಆಶಾ ಕಾರ್ಯಕರ್ತೆಯರು ಈ ಕೊರೋನಾಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ.ತಮ್ಮ ಕುಟುಂಬಗಳ
ಪರಿವೆಯೇ ಇಲ್ಲದೆ ಕಾರ್ಯನಿರ್ವಹಿಸುತ್ತದ್ದಾರೆ. ಕೊರೋನಾ ವಿಷಯದಲ್ಲಿ ಆರೋಗ್ಯ.ಕಂದಾಯ,ಪೋಲೀಸ್,ನಗರಸಬೆ,ಪುರಸಭೆ ಪೌರಕಾರ್ಮಿಕರ ಸೇವೆಯು
ಮರೆಯಲು ಸಾದ್ಯವಿಲ್ಲ. ಈ ಎಲ್ಲಾ ಇಲಾಖೆಯವರ ಕರ್ತವ್ಯದ
ಸಮನ್ವಯಯತೆಯಿಂದ ಕೊರೋನಾವು ಇನ್ನೂ ಹತೋಟಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸರಕಾರವು ನೀಡುತ್ತೀರುವ ಕೇವಲ 4000 ವೇತನದಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಈಕಡೆ ಕರ್ತವ್ಯದ ಚಿಂತೆ ಮತ್ತೊಂದುಕಡೆ ಕುಟುಂಬ ಸಾಗಿಸುವ ಚಿಂತೆ ಹೀಗಾಗಿ ನಾವೆಲ್ಲ ಮಾನಸಿಕವಾಗಿ ಕುಗ್ಗಿಹೋಗಿದ್ದೇವೆ.ಕಾರಣ ಕುಗ್ಗಿಹೋದ ಈ ಆಶಾಕಾರ್ಯಕರ್ತೆಯರ ಬದುಕನ್ನು ಎತ್ತಿ ಹಿಡಿಯುವ ಕೆಲಸ ಸರಕಾರದ ಮೇಲಿದೆ.ಕಾರಣ ದಯವಿಟ್ಟು ಸರಕಾರ ನಮ್ಮ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು .ಈ ಕುರಿತು ಇಂದು ಸುಮಾರು ನೂರಕ್ಕೂ ಹಚ್ಚು ಜನ ಆಶಾ ಕಾರ್ಯಕರ್ತೆ ಸಹೋದರಿಯರು ಇಂದು ರಬಕವಿ ಪಟ್ಟಣದಿಂದ ಬನಹಟ್ಟಿ ನಗರದ ಸರಕಾರಿ ಆಸ್ಪತ್ರೆವರೆಗೆ ರ್ಯಾಲಿ ಹಾಗೂ ಮಾನವ ಸರಪಳಿ ರಚಿಸುವ ಮೂಲಕ ಸರಕಾರದ
ಗಮನ ಸೆಳೆಯಲಾಗಿದೆ.ಈಗಾಗಲೇ ಬೇಡಿಕೆ ಇಡೇರುವವರೆಗೆ ಹೋರಾಟ ಮಾಡುವ ತಿರ್ಮಾಣತೆಗೆದುಕೊಂಡಿರುವ ನಾವು ಇಂದೂ ಕೂಡಾ ಹೋರಾಟ ಮುಂದುವರೆಸಲಾಗಿದೆ.ಅಲ್ಲದೇ ನಾಳೆಯೂ ಸಹ ಸರಕಾರಕ್ಕೆ ಸಾಮೂಹಿಕವಾಗಿ ಪತ್ರ ಬರೆಯುವ ಮೂಲಕ ಚಳುವಳಿಯನ್ನು ಮುಂದುವರೆಸಲಾಗುವುದು.ಎಂದು ಆಶಾಕಾರ್ಯಕರ್ತೆ ಸುಗಮದಾರರಾದ ಮಂಜುಳಾ ಸರಿಕರ ತಿಳಿಸಿದರು. ಈ ಸಂದರ್ಭದಲ್ಲಿ ಗಾಯತ್ರಿ ರಾವಳ,ಬೇಬಿಶ್ರೀ ಹಾಸಿಲಕರ,ಲಕ್ಷ್ಮೀ ತಳವಾರ,ಈರವ್ವ ಹೀರೇಮಠ,ಸುಜಾತಾ ಹೋಸೂರ,ಮಹಾನಂದಾ ಧರೆನ್ನವರ,ಪದ್ಮಾವತಿ ನಂದಗಾಂವ,ಭಾರತಿ ಮೋಪಗಾರ,ಸವೀತಾ ಕಡ್ಲಿಮಟ್ಟಿ,ಶಿವಲೀಲಾ ಪಾಟಿಲ,ಗಾಯತ್ರಿ ನಾವ್ಹಿ ಸೇರಿದಂತೆ ಇನ್ನೀತರರು ಇದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698



Social Plugin