ಬಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸ್ಥಾನದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆನಂದ ಕಂಪು ಅವರಿಂದ ಶಾಸಕ ಸಿದ್ದು ಸವದಿಯವರಿಗೆ ಮನವಿ ಅರ್ಪಿಸಿದರು.
ಬಿಡಿಸಿಸಿ ಬ್ಯಾಂಕ್ ಚುನಾವಣೆ: ಆನಂದ ಕಂಪು ಆಕಾಂಕ್ಷಿ
ನೇಕಾರ ವರ್ಗದಿಂದ ಆನಂದ ಕಂಪುಗೆ ಸ್ಪರ್ಧೆ ಅವಕಾಶಕ್ಕೆ ಒತ್ತಾಯ
ರಬಕವಿ-ಬನಹಟ್ಟಿ,ಜೂ1: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಸಲು ಸರ್ಕಾರದಿಂದ ದಿನಾಂಕ ನಿಗದಿಯಾಗಿದ್ದು, ರಬಕವಿ-ಬನಹಟ್ಟಿ ತಾಲೂಕಿನ ನೇಕಾರರ ಆಕಾಂಕ್ಷಿಗಳು ಸನ್ನದ್ಧರಾಗಿದ್ದಾರೆ.
ನೇಕಾರಿಕೆ ಸಮುದಾಯದಿಂದ ಯುವಕರ ಪಡೆ ನಿರ್ಮಿಸುವಲ್ಲಿ ಕಾರಣರಾಗಿರುವ ಆನಂದ ಕಂಪು ಅವರನ್ನು ಬಿಜೆಪಿ ಪಕ್ಷದ ಬೆಂಬಲಿತ ವ್ಯಕ್ತಿಯನ್ನಾಗಿ ಕಣಕ್ಕಿಳಿಸಬೇಕೆಂದು ರಬಕವಿ-ಬನಹಟ್ಟಿ ಹಾಗು ಮಹಾಲಿಂಗಪೂರ ಸೇರಿದಂತೆ ಅನೇಕ ಗ್ರಾಮಗಳಿಂದ ಆಗಮಿಸಿದ್ದ ನೂರಾರು ನೇಕಾರ ಮುಖಂಡರು ಶಾಸಕ ಸಿದ್ದು ಸವದಿಯವರನ್ನು ಒತ್ತಾಯಿಸಿದರು.
ರಾಜು ಅಂಬಲಿ, ದುಂಡಪ್ಪ ಮಾಚಕನೂರ, ಭೀಮಶಿ ಮಗದುಮ್, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಸುರೇಶ ಅಕ್ಕಿವಾಟ, ಜಿ.ಎಸ್. ಗೊಂಬಿ, ಮನೋಹರ ಶಿರೋಳ, ಸುರೇಶ ಕೋಲಾರ, ಸಿದ್ಧನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin