ರಬಕವಿಯ ಬಿಸಿಎಂ ಹಾಸ್ಟೇಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ 18 ಜನರು ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಹೊಂದಿದರು. 
ಸಾಂಸ್ಥಿಕ ಕ್ವಾರಂಟೈನ್‍ದಿಂದ 30 ಕ್ಕೂ ಅಧಿಕ ಜನ ಬಿಡುಗಡೆ...
ರಬಕವಿ-ಬನಹಟ್ಟಿ,ಜು15: ಕೊರೊನಾ ಪ್ರಕರಣದ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ 30 ಕ್ಕೂ ಅಧಿಕ ಜನರನ್ನು ಸಾಂಸ್ಥಿಕ್ ಕ್ವಾಂಟೈನ್‍ದಿಂದ ಬಿಡುಗಡೆ ಮಾಡಲಾಯಿತು.
ಬಿಡುಗಡೆಯಾದವರ ಪೈಕಿ ಬಹುತೇಕರು ನಾವಲಗಿ ಹಾಗು ಬನಹಟ್ಟಿ ಪಟ್ಟಣದ ಹಿರಿಯರೇ ಇದ್ದಾರೆ. ನಗರದ ಲಕ್ಷ್ಮೀ ನಗರದ ಕುಟುಂಬದ 6 ಜನರಿಗೆ ಕೋವಿಡ್ ಪಾಜಿಟಿವ್ ಬಂದ ಹಿನ್ನಲೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಜನರಾಗಿದ್ದಾರೆ.
_______________________________________
ಜಾಹೀರಾತು 👇
---------------------------------------------------------------
 ಇವರನ್ನು ಕಳೆದ 15 ದಿನಗಳಿಂದ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಅವರ ಸ್ವ್ಯಾಬ್ ಟೆಸ್ಟ್ ನೆಗೆಟಿವ್ ಬಂದ ಕಾರಣ ಇಂದು ಬಿಡುಗಡೆ ಮಾಡಲಾಯಿತು. ಇದರಿಂದ ಆತಂಕದಲ್ಲಿದ್ದ ಬನಹಟ್ಟಿ ಹಾಗು ನಾವಲಗಿ ಗ್ರಾಮದ ಜನತೆ ಮತ್ತಷ್ಟು ನಿರಾಳವಾದಂತಾಗಿದೆ. ಆರೋಗ್ಯ ಇಲಾಖೆ ಅಧಿಕಾರಿ ಹೂಗಾರ, ಶಿರಸ್ತೆದಾರ ಬಸವರಾಜ ಬಿಜ್ಜರಗಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಸೇರಿದಂತೆ ಅನೇಕ ಕಂದಾಯ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698