ತೇರದಾಳದ ಜೆವ್ಹಿ ಮಂಡಳದ ಎಸ್ ಜೆ ವಿದ್ಯಾಲಯದ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು.


ಜೆವ್ಹಿ ಮಂಡಳದ ದ್ವಿತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಶೇ.82.95

ತೇರದಾಳ : ಪಟ್ಟಣದ ಜೆವ್ಹಿ ಮಂಡಳದ ಎಸ್‍ಜೆ ವಿದ್ಯಾಲಯದ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತಿಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು ವಾಣಿಜ್ಯ ವಿಭಾಗದ ಫಲಿತಾಂಶವು ಶೇ. 92.55ರಷ್ಟು, ಕಲಾ ವಿಭಾಗ ಶೇ.83.33ರಷ್ಟು ಆಗಿದೆ ಎಂದು ಪ್ರಾಚಾರ್ಯ ಸಂತೋಷ ಕುಳ್ಳಿ ತಿಳಿಸಿದ್ದಾರೆ.



  ವಾಣಿಜ್ಯ ವಿಭಾಗದಲ್ಲಿ ಅನ್ನಪೂರ್ಣಾ ಮುಗಳಖೋಡ ಶೇ.95.5ರಷ್ಟು ಅಂಕಗಳನ್ನು ಪಡೆದು ಪ್ರಥಮ, ಸಿಮರಾನ್ ಅಲಾಸ್ ಶೇ.89.16ರಷ್ಟು ಅಂಕಗಳನ್ನು ಪಡೆದು ದ್ವಿತೀಯ, ನಫೀಸಾ ತಾಂಬೋಳಿ ಶೇ. 87ರಷ್ಟು ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ ಕಾಡೇಶ ಕೌಟೇಕರ ಶೇ. 89.5 ಪ್ರಥಮ, ಜ್ಯೋತಿ ಮರಿಗೊಂಡ ಶೇ. 84.5 ದ್ವಿತೀಯ, ತಯ್ಯಬ ಬೇಪಾರಿ ಶೇ. 83.5 ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 

_______________________________________
ಜಾಹೀರಾತು 👇
_______________________________________

  ಒಟ್ಟಾರೆ ಮಹಾವಿದ್ಯಾಲಯದ ಫಲಿತಾಂಶ ಶೇ.82.95 ಆಗಿದೆ. ಶಾಲಾ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಯವರು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.